ನಂದಿನಿ ತುಪ್ಪ, ಬೆಣ್ಣೆ, ಪನೀರ್ ಬೆಲೆಗಳಲ್ಲೂ ಭಾರೀ ಏರಿಕೆ
ಬೆಂಗಳೂರು: ಹಾಲು ಮತ್ತು ಮೊಸರಿನ ದರ ಏರಿಕೆಯ ಬೆನ್ನಲ್ಲೇ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಯು ತುಪ್ಪ, ಬೆಣ್ಣೆ ಹಾಗೂ ಪನೀರ್ ಬೆಲೆಗಳನ್ನು ಹೆಚ್ಚಳ ಮಾಡಿದೆ.
ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ದರಗಳನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದ್ದು, ನವೆಂಬರ್ 4 ರಿಂದಲೇ ಜಾರಿಗೆ ಬರುವಂತೆ ಪರಿಷ್ಕೃತ ದರಗಳನ್ನು ಅಧಿಕೃತವಾಗಿ ಘೋಷಿಸಲಾಗಿದೆ. ತುಪ್ಪದ ಬೆಲೆ ಲೀಟರ್ಗೆ 135 ರೂಪಾಯಿ ಹೆಚ್ಚಾಗಿದ್ದರೆ, ಬೆಣ್ಣೆ ಬೆಲೆ ಕೆಜಿಗೆ 80 ರೂ. ಹಾಗೂ ಪನ್ನೀರ್ ಬೆಲೆ ಕೆಜಿಗೆ 77 ರೂ. ವರೆಗೆ ಹೆಚ್ಚಳ ಮಾಡಲಾಗಿದೆ.
ತುಪ್ಪ:
ನಂದಿನಿ ತುಪ್ಪದ ಬೆಲೆಯಲ್ಲಿ ಪ್ರತಿ ಲೀಟರ್ಗೆ 100ರಿಂದ 135 ರೂ.ವರೆಗೆ ಏರಿಕೆ ಮಾಡಲಾಗಿದೆ.
ಒಂದು ಲೀಟರ್ ಸ್ಯಾಚೆಟ್: ಹಳೆಯ ಬೆಲೆ 715 ಇತ್ತು, ಇದೀಗ 850ಕ್ಕೆ ಏರಿಕೆಯಾಗಿದೆ. (135 ರೂ. ಹೆಚ್ಚಳ).
ಒಂದು ಲೀಟರ್ ಪೆಟ್ ಜಾರ್: ಹಳೆಯ ಬೆಲೆ 735 ರೂ. ಇದ್ದದ್ದು, ಈಗ 870 ರೂ.ಗೆ ಏರಿಕೆಯಾಗಿದೆ (135 ರೂ. ಹೆಚ್ಚಳ).
ಬೆಣ್ಣೆ:
ಬೆಣ್ಣೆ ಪ್ರತೀ ಕೆಜಿಗೆ ಸುಮಾರು 80 ರೂ.ನಷ್ಟು ಏರಿಕೆಯಾಗಿದೆ. ಹಳೆಯ ಬೆಲೆ 700 ರೂ. ಇ ತ್ತು, ಇದೀಗ 780ಕ್ಕೆ ಏರಿಕೆಯಾಗಿದೆ.
500 ಗ್ರಾಂ ಉಪ್ಪಿಲ್ಲದ ಬೆಣ್ಣೆ: ಹಳೆಯ ಬೆಲೆ 285 ರೂ.ನಿಂದ 390 ರೂ.ಗೆ ಏರಿಕೆಯಾಗಿದೆ.
500 ಗ್ರಾಂ ಉಪ್ಪು ಸಹಿತ ಬೆಣ್ಣೆ: ಹೊಸ ಬೆಲೆ ರೂ.380.
100 ಗ್ರಾಂ ಉಪ್ಪು ಸಹಿತ ಬೆಣ್ಣೆ: ಹೊಸ ಬೆಲೆ ರೂ.90.
200 ಗ್ರಾಂ ಉಪ್ಪಿಲ್ಲದ ಬೆಣ್ಣೆ: ಹೊಸ ಬೆಲೆ ರೂ.160
ಪನೀರ್:
ಪನೀರ್ ಬೆಲೆಯಲ್ಲಿ ಪ್ರತೀ ಕೆಜಿಗೆ 77 ರೂನಷ್ಟು ಹೆಚ್ಚಳ.
ಒಂದು ಕೆಜಿ ಪ್ಯಾಕ್: ಹಳೆಯ ಬೆಲೆ 408 ರೂ. ಇದ್ದದ್ದು, ಈಗ 485 ರೂ.ಗೆ ಏರಿಕೆಯಾಗಿದೆ.
500 ಗ್ರಾಂ ಪ್ಯಾಕ್: ಪರಿಷ್ಕೃತ ಬೆಲೆ 260 ರೂ.
200 ಗ್ರಾಂ ಪ್ಯಾಕ್: ಹಳೆಯ ಬೆಲೆ ರೂ.96 ಇದ್ದದ್ದು, ಈಗ 115 ರೂ.ಗೆ ಏರಿಕೆಯಾಗಿದೆ.
200 ಗ್ರಾಂ ಮೀಡಿಯಂ ಫ್ಯಾಟ್ ಪನೀರ್: ಹೊಸ ಬೆಲೆ ರೂ.110.
ಇದರೊಂದಿಗೆ ತೃಪ್ತಿ ಹಾಲಿನ ದರದಲ್ಲೂ ಬದಲಾವಣೆಯಾಗಿದ್ದು, 135 ಎಂಎಲ್ ಗೆ ರೂ.11 ಹಾಗೂ 450 ಎಂಎಲ್ಗೆ ರೂ.33 ನಿಗದಿಪಡಿಸಲಾಗಿದೆ.