Ballari | ಕಂಪ್ಲಿ ಜಿಪಿಟಿ ಶಿಕ್ಷಕರ ಸಂಘದ ಚುನಾವಣೆ : 12 ನಾಮಪತ್ರ ಸಲ್ಲಿಕೆ
ಬಳ್ಳಾರಿ/ಕಂಪ್ಲಿ: ಕರ್ನಾಟಕ ರಾಜ್ಯ (6ರಿಂದ 8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (ಜಿಪಿಟಿ) ಕಂಪ್ಲಿ ತಾಲೂಕು ಘಟಕದ 2026-31ನೇ ಸಾಲಿನ ಚುನಾವಣೆಗೆ ಒಟ್ಟು 12 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಚುನಾವಣಾಧಿಕಾರಿ ಹಾಗೂ ನಿವೃತ್ತ ಶಿಕ್ಷಕ ವೀರೇಶ್ ತಿಳಿಸಿದ್ದಾರೆ.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು, ಸಂಘದ ಒಟ್ಟು 12 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ಪ್ರಕಟಿಸಲಾಗಿದೆ. ಇದರಲ್ಲಿ 8 ಪುರುಷರು ಮತ್ತು 4 ಮಹಿಳೆಯರಿಗೆ ಸ್ಥಾನ ಮೀಸಲಾಗಿದೆ.
ನಿಗದಿತ 12 ಸ್ಥಾನಗಳಿಗೆ ಸರಿಯಾಗಿ 8 ಪುರುಷರು ಹಾಗೂ 4 ಮಹಿಳೆಯರು ಸೇರಿ ಒಟ್ಟು 12 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿರುವುದು ವಿಶೇಷವಾಗಿದೆ.
ಮಂಜುನಾಥ, ಉಮೇಶ್, ಗಾದಿಲಿಂಗಪ್ಪ, ಪಂಪನಗೌಡ, ಬಸವರಾಜ, ಪಾಂಡುರಂಗ, ವಾಲ್ಮೀಕಿ ಆಂಜಿನೇಯ್ಯ, ಎನ್. ಶಿವಕುಮಾರ, ಸುನೀತಕುಮಾರಿ, ಜ್ಯೋತಿ ಇಟಗಿ, ರಾಜೇಶ್ವರಿ ಮತ್ತು ರೇಖಾ ನಾಮಪತ್ರ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 23ರಂದು ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 25ರಂದು ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು ಸ್ಥಾನಗಳಿಗೆ ಸಮನಾಗಿ ನಾಮಪತ್ರಗಳು ಸಲ್ಲಿಕೆಯಾಗಿರುವುದರಿಂದ, ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.