×
Ad

ಬೀದರ್ | ಸರಳ ಸಾಮೂಹಿಕ ವಿವಾಹದ ನೋಂದಣಿಗೆ ಅರ್ಜಿ ಆಹ್ವಾನ

Update: 2025-08-10 19:00 IST

ಬೀದರ್ : ಖರ್ಗೆ ಶಾರದಾ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರಳ ಸಾಮೂಹಿಕ ವಿವಾಹ ನಡೆಸಲಾಗುತ್ತಿದ್ದು, ವಿವಾಹದ ನೋಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ರಾಚಪ್ಪ ಖರ್ಗೆ ಹಾಗೂ ನಿರ್ದೇಶಕ ಭೀಮರಾವ್ ಮಾಲಗತ್ತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಧು ವರರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಧನ ಸಹಾಯ ನೀಡಲಾಗುತ್ತದೆ. ಗ್ರಾಮೀಣ ಹಾಗೂ ನಗರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನ ಸಾಮಾನ್ಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಅರ್ಜಿ ಸಲ್ಲಿಸಲು ಆ.31 ಕೊನೆಯ ದಿನಾಂಕ ನಿಗದಿಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ರಾಚಪ್ಪ ಖರ್ಗೆ ಅವರ ದೂರವಾಣಿ ಸಂಖ್ಯೆ: 94495 13444, ಭೀಮರಾವ್ ಮಾಲಗತ್ತಿ ಅವರ ದೂರವಾಣಿ ಸಂಖ್ಯೆ: 89043 12900 ಗೆ ಸಂಪರ್ಕಿಸಬಹು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News