×
Ad

ಬೀದರ್ | ಗಣೇಶ, ಈದ್ ಮಿಲಾದ್ ಹಬ್ಬದ ಹಿನ್ನಲೆ : ನಗರದಲ್ಲಿ ಪೊಲೀಸ್ ಪಥ ಸಂಚಲನ

Update: 2025-08-26 18:49 IST

ಬೀದರ್ : ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನಲೆಯಲ್ಲಿ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ ನಡೆಸಲಾಯಿತು.

ಇಂದು ಬೆಳಿಗ್ಗೆ ಪಥ ಸಂಚಲನ ಪ್ರಾರಂಭವಾಗಿ, ನಗರದ ಮಂಗಲಪೇಟ್, ಚೌಬಾರ, ಶಹಗಂಜ್ ಕಮಾನ್, ಅಂಬೇಡ್ಕರ್ ವೃತ್ತದ ಮೂಲಕ ಬಸವೇಶ್ವರ್ ವೃತ್ತದ ವರೆಗೆ ಪಥ ಸಂಚಲನ ಸಾಗಿತ್ತು.

ಈ ಸಂದರ್ಭದಲ್ಲಿ ಎಸ್ಪಿ ಪ್ರದೀಪ್ ಗುಂಟಿ ಅವರು ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆ ನಮ್ಮ ದೇಶದ ಸಂಸ್ಕೃತಿಯಾಗಿದ್ದು, ಜಿಲ್ಲೆಯಲ್ಲಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬ ಸರ್ಹಾದತೆಯ ಸಾಂಕೇತಿಕ ಹಬ್ಬಗಳಾಗಿದ್ದರಿಂದ ಸಾರ್ವಜನಿಕರು ಶಾಂತಯುತವಾಗಿ, ಸೌಹಾರ್ದತೆಯ ಭಾವದಿಂದ ಹಬ್ಬ ಆಚರಿಸುವಂತೆ ಅವರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News