ಬೀದರ್ | ಚಿಮ್ಮೆಗಾಂವ್ ತಾಂಡಾದ ಸೇತುವೆ ಕುಸಿತ : ಸಂಪರ್ಕ ಕಡಿತ
ಬೀದರ್ : ನಿರಂತರ ಮಳೆಯಿಂದಾಗಿ ಚಿಮ್ಮೆಗಾಂವ್ ತಾಂಡಾಕ್ಕೆ ಸಂಪರ್ಕಿಸುವ ಸೇತುವೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ತಾಂಡಾದ ಸಂಪರ್ಕ ಕಡಿತಗೊಂಡಿದೆ.
ಚಿಮ್ಮೆಗಾಂವ್ ತಾಂಡಾದಲ್ಲಿ ಬೈಕ್ ಸೇರಿದಂತೆ ಯಾವುದೇ ವಾಹನಗಳು ಸಾಗುತ್ತಿಲ್ಲ. ಮನುಷ್ಯರಿಗೂ ಕೂಡ ತಾಂಡಾದಿಂದ ಹೊರಹೋಗಲು ಹಾಗೂ ಬೇರೆ ಕಡೆಯಿಂದ ತಾಂಡಾಕ್ಕೆ ಸಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ಈ ತಾಂಡಾದಿಂದ ಹೊರಗಡೆ ಹೋಗಬೇಕು ಎಂದರೆ ಜನರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಈ ರಸ್ತೆ ಮೂಲಕ ಚಿಮ್ಮೆಗಾಂವ್ ಗ್ರಾಮಕ್ಕೆ ತಲುಪಿ, ಅಲ್ಲಿಂದ ಬೇರೆಡೆ ಸಾಗುತ್ತಾರೆ. ಸೇತುವೆ ಕುಸಿದ ಪರಿಣಾಮ ಸಂಪೂರ್ಣವಾಗಿ ಸಂಪರ್ಕ ಕಡಿತವಾಗಿದೆ ಎನ್ನಲಾಗಿದೆ.
ಜಿಲ್ಲೆಯ ಬಹುತೇಕ ಎಲ್ಲ ಹಳ್ಳ, ಕೆರೆ, ಡ್ಯಾಮ್ ಗಳು ಭರ್ತಿಯಾಗಿದ್ದು, ಕೆಲವೊಂದು ಕಡೆಯಲ್ಲಿ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಚುಳಕಿನಾಲಾ (ಮುಸ್ತಾಪುರ್) ಜಲಾಶಯದಿಂದ ನೀರು ಬಿಡಲಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾದ ಆಗತ್ಯವಿದೆ.