ಹುಲಸೂರು : ಸಾಲ ಬಾಧೆ ತಾಳದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಆಂಡಿಕೊಂಡ ಘಟನೆ ಕೊಂಗಳಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

ಕೊಂಗಳಿ ಗ್ರಾಮದ ನಿವಾಸಿ ಅಮೋಲ್ ಅಟ್ಟರಗೆ (34) ಅವರು ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ.

ಈ ಘಟನೆ ಕುರಿತು ಮೃತರ ತಾಯಿ ಸಾವಿತ್ರಿಬಾಯಿ ಶಿವಾಜಿರಾವ್ ಅಟ್ಟರಗೆ ಅವರು ಮೇಹಕರ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಳೆಯ ಕೊರತೆಯಿಂದ ಕಬ್ಬಿನ ಬೆಳೆ ಒಣಗಿ ಅಪಾರ ನಷ್ಟ ಉಂಟಾಗಿದ್ದು, ಕೃಷಿಯಿಂದ ನಿರೀಕ್ಷಿತ ಆದಾಯ ಬಾರದ ಹಿನ್ನೆಲೆಯಲ್ಲಿ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನನ್ನ ಪತಿಯ ಹೆಸರಿನಲ್ಲಿ 40 ಸಾವಿರ ರೂ. ಹಾಗೂ ತಮ್ಮ ಹೆಸರಿನಲ್ಲಿ 23,500ರೂ. ಸಾಲವಿದೆ. ಅದಲ್ಲದೆ, ಖಾಸಗಿ ವ್ಯಕ್ತಿಗಳಿಂದ ಸುಮಾರು 2 ಲಕ್ಷ ರೂ. ಮತ್ತು ಫೈನಾನ್ಸ್‌ನಲ್ಲಿ 1 ಲಕ್ಷ ರೂ. ಸಾಲ ಪಡೆಯಲಾಗಿತ್ತು. ಈ ಸಾಲದ ಕಂತುಗಳನ್ನು ಮಗನೇ ಪಾವತಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬೆಳೆ ನಷ್ಟ, ಬರಗಾಲದ ಪರಿಸ್ಥಿತಿ ಹಾಗೂ ಕುಟುಂಬದ ಸಾಲದ ಹೊರೆ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು. ಬೆಳೆ ನಷ್ಟವನ್ನು ಪರಿಶೀಲಿಸಿ, ಸರಕಾರದ ನಿಯಮಾನುಸಾರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಘಟನೆ ಕುರಿತು ಮೇಹಕರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor