ಬೀದರ್ | ರಾಜೀವ ಗಾಂಧಿ ಅವರ ಸಾಧನೆ ನಮ್ಮೆಲ್ಲರಿಗೂ ಸ್ಫೂರ್ತಿ : ಗೀತಾ ಪಂಡಿತರಾವ್ ಚಿದ್ರಿ
ಬೀದರ್ : ರಾಜೀವ ಗಾಂಧಿ ಅವರ ಸಾಧನೆ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಅವರ ಉದ್ದೇಶಗಳನ್ನು ನಾವು ತಿಳಿದುಕೊಂಡು ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಅವರು ಕರೆ ನೀಡಿದರು.
ನಗರದ ದಿಶಾ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಇಲಾಖೆ, ಮೇರಾ ಯುವ ಭಾರತ ಬೀದರ್, ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಮಾಣಿಕ್ ಯುವ ಸಾಂಸ್ಕೃತಿಕ ಕಲಾ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹುಟ್ಟು ಹಬ್ಬದ ನಿಮಿತ್ಯ ಸದ್ಭಾವನಾ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜೀವ ಗಾಂಧಿಯವರು ದೇಶದ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದರು. ಆಡಳಿತದಲ್ಲಿ ಅವರ ಮುಂದಾಲೋಚನೆ ಮತ್ತು ಆಧುನಿಕ ವಿಧಾನಕ್ಕೆ ಅವರು ಹೆಸರುವಾಸಿಯಾಗಿದ್ದರು. ಶಿಕ್ಷಣದಿಂದ ಸಮಾನತೆ ತರಲು ಅವರು ಬಯಸಿದ್ದರು ಎಂದು ತಿಳಿಸಿದ ಅವರು, ವಿದ್ಯಾಭ್ಯಾಸ ಎಲ್ಲಕ್ಕಿಂತ ಮುಖ್ಯವಾಗಿದ್ದು, ಒಳ್ಳೆಯ ವಿದ್ಯಾಭ್ಯಾಸ ಮಾಡಿ ಮುಂದೆ ಉನ್ನತ ಸ್ಥಾನಕ್ಕೆ ಬೆಳಿದು ನಿಲ್ಲಬೇಕಿದೆ ಎಂದರು.
ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಮಂಗಲಾ ಮರಕಲೆ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸದ್ಭಾವನಾ ದಿವಸ ನಿಮಿತ್ಯ ನಿಶಾ ಪ್ಯಾರಾಮೆಡಿಕಲ್ ಕಾಲೇಜನಲ್ಲಿ ರಾಜೀವ ಗಾಂಧಿಯವರ ಜೀವನ ಚರಿತ್ರೆ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ರೇಷ್ಮಾ ನಾಗನಾಥ್, ದ್ವಿತೀಯ ಸ್ಥಾನ ಗಳಿಸಿದ ಶ್ರೀತ ಮತ್ತು ಸಾಕ್ಷಿ, ಹಾಗೆಯೇ ತೃತೀಯ ಸ್ಥಾನ ಗಳಿಸಿದ ಲಕ್ಷ್ಮಿ, ಸೈಯದ್ ಅಬ್ದುಲ್ ರೊಯ್ ಅವರಿಗೆ ಪ್ರಮಾಣ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿಗಳಾದ ಅಶ್ವಿನಿ ರೆಡ್ಡಿ, ನವಿತಾ ಅನುಪರಾಜ್, ರಾಧಿಕಾ ಪ್ರವೀಣ್ ಕುಲಕರ್ಣಿ, ಅನುಪರಾಜ್, ವೀರಭದ್ರ ಮರ್ಜಾಪುರೆ ಮತ್ತು ಭಾಗ್ಯಶ್ರೀ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.