ಬೀದರ್ | ಜಂಬಗಿ ಸರಕಾರಿ ಶಾಲೆಯ ನೂತನ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸಲ್ಲಾವುದ್ದಿನ್ ಆಯ್ಕೆ
Update: 2025-09-08 17:30 IST
ಬೀದರ್ : ಜಂಬಗಿ ಗ್ರಾಮದ ಸರಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸಲ್ಲಾವುದ್ದಿನ್ ಅವರು ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಮೀನಾಬಾಯಿ ಅವರು ಆಯ್ಕೆಯಾಗಿದ್ದಾರೆ.
ಶಾಲೆಯಲ್ಲಿ ಒಟ್ಟು 18 ಸದಸ್ಯರಿದ್ದರು. ಅದರಲ್ಲಿ ಸರ್ವಾನುಮತದಿಂದ ಇಬ್ಬರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆ ಸಭೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶರಣಪ್ಪ ಗಾದಗೆ, ಪ್ರಭಾರಿ ಮುಖ್ಯಗುರು ವಸಂತರಾವ್, ಗ್ರಾಮ ಪಂಚಾಯತ್ ಸದಸ್ಯರಾದ ಓಂ ಪ್ರಕಾಶ್, ದಯಾನಂದ್, ಅಹಮದ್,ಅಂಬಾದಾಸ್ ಕಾಡಗೆ, ಸಂಪನ್ಮೂಲ ವ್ಯಕ್ತಿರವೀಂದ್ರ ಡಿಗ್ಗಿ ಹಾಗೂ ವಿಠಲ್ ಬದುರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.