ಬೀದರ್: ಬಹುಜನ ಯುತ್ ಪ್ಯಾಂಥರ್ ಸಂಘಟನೆಯ ಬಸವಕಲ್ಯಾಣ ಹಾಗೂ ಭಾಲ್ಕಿ ತಾಲೂಕು ಸಮಿತಿಗಳ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಬುಧವಾರ ನಗರದ ಅಂಬೇಡ್ಕರ್ ವೃತ್ತದ ಸಮೀಪವಿರುವ ಪ್ರವಾಸಿ ಮಂದಿರದಲ್ಲಿ ನಡೆಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ಪುಟ್ಟರಾಜ್ ದೀನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬಸವಕಲ್ಯಾಣ ತಾಲೂಕು ಸಮಿತಿಯ ಅಧ್ಯಕ್ಷರಾಗಿ ದಯಾನಂದ್ ಗೋಡಬಲೆ, ಉಪಾಧ್ಯಕ್ಷರಾಗಿ ದಿಲೀಪ್ ಕಾಂಬಳೆ, ಕಾರ್ಯದರ್ಶಿಯಾಗಿ ನಾಗೇಶ್ ಘಂಟೆ ಹಾಗೂ ಖಜಾಂಚಿಯಾಗಿ ಸೂರ್ಯಕಾಂತ್ ಕಾಂಬಳೆ ಆಯ್ಕೆಯಾದರು. ಸದಸ್ಯರಾಗಿ ಕೃಷ್ಣ ಸಿಂದೆ, ಸಚಿನ್ ಕಾಂಬಳೆ, ಪವನ್ ಸೂರ್ಯವಂಶಿ, ಸಂಗೂ ಧೋಳೆ, ಶ್ರೀಮಂತ್ ಖರ್ಗೆ, ವಿಶ್ವನಾಥ್ ಫುಲೆ ಹಾಗೂ ಮಹೇಶ್ ಗಾಯಕವಾಡ್ ಆಯ್ಕೆಯಾದರು.

ಭಾಲ್ಕಿ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಸುನೀಲ್ ನಾಟೇಕರ್, ಉಪಾಧ್ಯಕ್ಷರಾಗಿ ಆದರ್ಶ್ ಭಾವಿಕಟ್ಟಿ, ಕಾರ್ಯದರ್ಶಿಯಾಗಿ ಶಿವಾ ಭಾವಿಕಟ್ಟಿ ಹಾಗೂ ಖಜಾಂಚಿಯಾಗಿ ಅನೀಲ ನಾಟೇಕರ್ ಆಯ್ಕೆಯಾದರು. ಸದಸ್ಯರಾಗಿ ಅಜಯ್ ಕಟ್ಟಿಮನಿ, ಪೃಥ್ವಿರಾಜ್ ವಾಘಮಾರೆ, ಹರೀಶ್ ವಾಘಮಾರೆ ಹಾಗೂ ಅವಿನಾಶ್ ಕಾಂಬಳೆ ಅವರನ್ನು ಆಯ್ಕೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor