×
Ad

ಬೀದರ್ | ದುಬಲಗುಂಡಿಯ ಮನೆಯೊಂದರಲ್ಲಿ ಕಳ್ಳತನ : ಪ್ರಕರಣ ದಾಖಲು

Update: 2025-08-25 21:18 IST

ಬೀದರ್ : ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನವಾಗಿದ್ದು, ರವಿವಾರ ಪ್ರಕರಣ ದಾಖಲಾಗಿದೆ.

ದುಬಲಗುಂಡಿ ಗ್ರಾಮದ ನಿವಾಸಿ ಪವನ ದೂರು ನೀಡಿದ್ದು, ಶನಿವಾರ ರಾತ್ರಿ ಎಂದಿನಂತೆ ಊಟ ಮಾಡಿ ಮನೆಯಲ್ಲಿ ಮಲಗಿದ್ದೆವು. ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ನಮ್ಮ ಬಾಗಿಲಿನ ಹೊರಗಡೆಯಿಂದ ಚಿಲಕ ಹಾಕಲಾಗಿತ್ತು. ಅಕ್ಕ ಪಕ್ಕದವರು ಬಾಗಿಲು ತೆಗೆದರು. ಇನ್ನೊಂದು ಕೋಣೆಯ ಅಲಮಾರಿಯಲ್ಲಿ ಇಟ್ಟಿದ್ದ 80 ಸಾವಿರ ರೂ. ಬೆಲೆ ಬಾಳುವ ಚಿನ್ನದ ಆಭರಣ, 34 ಸಾವಿರ ರೂ. ನಗದು ಹಣ ಹಾಗೂ 10 ಸಾವಿರ ರೂ. ಬೆಲೆ ಬಾಳುವ 10 ತೊಲೆ ಬೆಳ್ಳಿ ಆಭರಣ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಹಳ್ಳಿಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News