ಬೀದರ್ | ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳ್ಳತನ : ಪ್ರಕರಣ ದಾಖಲು
Update: 2025-09-08 23:25 IST
ಬೀದರ್ : ನಗರದ ಶಹಾಪುರ್ ಗೇಟ್ ಹತ್ತಿರದ ಬಯಲು ಪ್ರದೇಶದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳ್ಳತನವಾಗಿದ್ದು, ರವಿವಾರ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸಂತೋಷ್ ಅವರಿಗೆ ಈ ಟ್ರ್ಯಾಕ್ಟರ್ ಸೇರಿದೆ. ಇದಕ್ಕೆ ಸಂಬಂಧಿಸಿದಂತೆ ಅವರು ದೂರು ನೀಡಿದ್ದು, ಒಂದು ವರ್ಷದ ಹಿಂದೆ ಔರಾದ್ ತಾಲ್ಲೂಕಿನ ವ್ಯಕ್ತಿಯೊರ್ವರಿಂದ ಒಂದು ಟ್ರ್ಯಾಕ್ಟರ್ ಮತ್ತು ಅದರ ಟ್ರಾಲಿ ಖರೀದಿ ಮಾಡಿದ್ದೇನೆ. ಎರಡು ಸೇರಿ ಸುಮಾರು 4 ಲಕ್ಷ 60 ಸಾವಿರ ಬೆಳೆ ಬಾಳುವುದಾಗಿವೆ. ನಮ್ಮ ತಮ್ಮ ಟ್ರ್ಯಾಕ್ಟರ್ ಅನ್ನು ಗಣೇಶ್ ವಿಸರ್ಜನೆಗೆ ಬಾಡಿಗೆ ಮಾಡಿಕೊಂಡು ಶಹಾಪುರ್ ಗೇಟ್ ಹತ್ತಿರದ ಬಯಲು ಪ್ರದೇಶದಲ್ಲಿ ತಂದು ನಿಲ್ಲಿಸಿದ್ದಾನೆ. ಆದರೆ ಅಲ್ಲಿ ನಿಲ್ಲಿಸಿದ ನಮ್ಮ ಟ್ರ್ಯಾಕ್ಟರ್ ಮತ್ತು ಟ್ರಾಲಿ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.