ಬೀದರ್ | ಸಾಹಿತ್ಯದಲ್ಲಿನ ಶಬ್ದಗಳು ಭಾವನೆಗೆ ಸಮನಾಗಿರಬೇಕು : ಸ್ವಾತ್ಮಾನಂದ ಗಿರಿ ಸ್ವಾಮೀಜಿ
ಬೀದರ್ : ಸಾಹಿತ್ಯದಲ್ಲಿನ ಶಬ್ದಗಳು ಭಾವನೆಗೆ ಸಮನಾಗಿರಬೇಕು. ಆವಾಗ ಮಾತ್ರ ಸಾಹಿತ್ಯವು ಜನರ ಮನ ಮುಟ್ಟಿ, ನೈಜತೆಯನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸ್ವಾತ್ಮಾನಂದ ಗಿರಿ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಇಂದು ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ್ ಹಾಗೂ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಮಹಾವಿದ್ಯಾಲಯ ಬೀದರ್ ಇವರ ಸಹಯೋಗದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಾಹಿತ್ಯದ ಪಾತ್ರ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಎಂಬ ಅರಮನೆಯಲ್ಲಿ ಮುತ್ತು ರತ್ನಗಳಿವೆ. ಅದರೊಳಗೆ ಒಳ ಹೊಕ್ಕು ನೋಡಿದವನಿಗೆ ಮಾತ್ರ ಸಾಹಿತ್ಯದ ರುಚಿ ಸಿಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಚದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಹಾವಗಿರಾವ್ ಅವರು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕೆ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಬಂದುಕಿಗಿಂತ ಪೆನ್ನು ಹರಿತವಾಗಿದೆ. ಪೆನ್ನಿನಿಂದ ಮೂಡಿ ಬಂದ ಅಕ್ಷರಗಳು ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುತ್ತವೆ ಎಂದು ತಿಳಿಸಿದರು.
ಸಾಹಿತಿ ಎಸ್.ಎಮ್ ಜನವಾದಕರ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ನಾಗಪ್ಪ ಜಾನಕನೋರ್, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ. ಆರ್.ವಿ ಗಂಗಶೆಟ್ಟಿ, ಯುವ ಸಾಹಿತಿ ಡಾ.ಸಂಗಪ್ಪ ತೌಡಿ, ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕ ಡಾ.ಮಕ್ತುಂಬಿ, ಉಪನ್ಯಾಸಕ ನಟರಾಜ್, ರಾಜಶೇಖರ್, ನೆಹರು ಪವಾರ್, ಬಸವರಾಜ್ ಬಿರಾದಾರ್, ರಾಜಮ್ಮ ನೇಳಗೆ, ಅರ್ಚನಾ, ಸಪ್ನಾ, ವಿಜಯಲಕ್ಷ್ಮಿ, ರಾಖಿ ಕಾಡಗೆ, ಉಪನ್ಯಾಸಕ ಈಶ್ವರ್ ರೆಡ್ಡಿ, ಶ್ರೀಲತಾ ಹಾಗೂ ಸಿಬ್ಬಂದಿ ಆಕಾಶ, ಶೋಭಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.