ನಿರಂತರ ಮಳೆ : ಬೀದರ್ ಜಿಲ್ಲೆಯಲ್ಲಿ 66,906 ಹೆಕ್ಟೇರ್ ಬೆಳೆ ಸೇರಿದಂತೆ ಇತರ ಪ್ರದೇಶ ಹಾನಿ
Update: 2025-08-29 16:42 IST
ಬೀದರ್ : ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಸದ್ಯಕ್ಕೆ 66,906 ಹೆಕ್ಟೇರ್ ಬೆಳೆ ಸೇರಿದಂತೆ ಇತರ ಪ್ರದೇಶಗಳಿಗೂ ಹಾನಿಯಾಗಿದ್ದು, ಇನ್ನು ಸಮೀಕ್ಷೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಜಿಲ್ಲೆಯಲ್ಲಿ 2025-26ನೇ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ ವಾಡಿಕೆ 466.00 ಮೀ.ಮೀ ಮಳೆ ಬೇಕಾಗಿದ್ದು, ಸದ್ಯಕ್ಕೆ 467.00 ಮೀ.ಮೀ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲಾದ್ಯಂತ 59 ಮೀ.ಮೀ ಮಳೆಯಾಗಿದೆ.
ಒಟ್ಟು 1,335 ಶಾಲಾ ಕೊಠಡಿಗಳು, 94 ಮನೆಗಳು, 70 ಕೀ.ಮೀ ರಸ್ತೆ, 47 ಬ್ರಿಡ್ಜ್, 138 ವಿದ್ಯುತ್ ಕಂಬ, 21 ಟ್ರಾನ್ಸ್ ಫಾರ್ಮ್ ಗಳು, 11 ಕೀ.ಮೀ ವಿದ್ಯುತ ತಂತಿ, 38 ಸಣ್ಣ ನೀರಾವರಿ ಇಲಾಖೆಯ ಕೆರೆ (ಯೋಜನೆಗಳು) ಮತ್ತು 66,906 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ಇನ್ನು ಸಮೀಕ್ಷೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.