×
Ad

ದಸರಾ ಸಿಎಂ ಕಪ್ ಕ್ರೀಡಾಕೂಟ: ವೆಯ್ಟ್ ಲಿಫ್ಟಿಂಗ್ ನಲ್ಲಿ ಕೊಪ್ಪದ ಫಾಝಿಲ್ ರಹ್ಮಾನ್ ಗೆ ಚಿನ್ನದ ಪದಕ

Update: 2024-10-10 14:16 IST

ಚಿಕ್ಕಮಗಳೂರು: 'ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ, ಬೆಂಗಳೂರು ಇದರ ಸಹಯೋಗದಲ್ಲಿ ಮೈಸೂರಿನಲ್ಲಿ ನಡೆದ 2024ನೇ ಸಾಲಿನ 'ದಸರಾ ಸಿಎಂ ಕ್ರೀಡಾಕೂಟ'ದ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕೊಪ್ಪದ ಫಾಝಿಲ್ ರಹ್ಮಾನ್ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಜಯಿಸಿದ್ದಾರೆ.

ವೆಯ್ಟ್ ಲಿಫ್ಟಿಂಗ್ ನ 109 ಕೆ.ಜಿ. ವಿಭಾಗದಲ್ಲಿ ಫಾಝಿಲ್ ರಹ್ಮಾನ್ ಈ ಸಾಧನೆ ಮಾಡಿದ್ದಾರೆ.

ಕಳೆದರಡು ವರ್ಷದಲ್ಲೂ ಇವರು ಬೆಳ್ಳಿ ಹಾಗೂ ಚಿನ್ನದ ಪದಕ ಜಯಿಸಿದ್ದರು. ಈ ಬಾರಿ ಮತ್ತೊಮ್ಮೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದೇ ತಿಂಗಳು ಹಿಮಾಚಲ ಪ್ರದೇಶದಲ್ಲಿ ನಡೆಯುವ ಸೀನಿಯರ್ ನ್ಯಾಶನಲ್ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಫಾಝಿಲ್ ರಹ್ಮಾನ್ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಇವರು ಪ್ರಸಕ್ತ ಬೆಂಗಳೂರಿನ ಸೈಂಟ್ ಫ್ರಾನ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News