×
Ad

ವೈಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಫಾಝಿಲ್ ರಹ್ಮಾನ್‌ಗೆ ಚಿನ್ನದ ಪದಕ

Update: 2024-08-23 22:51 IST

ಚಿಕ್ಕಮಗಳೂರು: ಮೈಸೂರಿನಲ್ಲಿ ನಡೆದ ಸೀನಿಯರ್ ವೈಟ್ ಲಿಫ್ಟಿಂಗ್‌ನ 102 ಕೆ.ಜಿ ವಿಭಾಗದಲ್ಲಿ ಫಾಝಿಲ್ ರಹ್ಮಾನ್‌ ಅವರು ಚಿನ್ನದ ಪದಕ ಪಡೆದಿದ್ದು, ಅವರು ಈ ಕೂಟದಲ್ಲಿ ಒಟ್ಟು 322 ಕೆ.ಜಿ ಭಾರ ಎತ್ತುವ ಮೂಲಕ ರಾಜ್ಯದಲ್ಲಿ ಹೊಸ ದಾಖಲೆ ಮಾಡಿದ್ದಾರೆ.

ಕಳೆದ ಎರಡು ವರ್ಷವೂ ಇವರು ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಹಾಗೂ ಕಂಚಿನ ಪದಕ ಪಡೆದಿದ್ದು, 2022/23ರ ಖೇಲೋ ಇಂಡಿಯಾ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ. ಮೂರನೇ ವರ್ಷ ಚಿನ್ನದ ಪದಕ ಪಡೆದು ಸಾಧನೆಯ ಜೊತೆಗೆ ದಾಖಲೆಯನ್ನೂ ಮಾಡಿದ್ದಾರೆ.

ಅಕ್ಟೋಬರ್ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆಯುವ ಸೀನಿಯರ್ ನ್ಯಾಷನಲ್ ವೈಟ್ ಲಿಫ್ಟಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಫಾಝಿರ್ ರಹ್ಮಾನ್‌ ಅವರು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಬೆಂಗಳೂರಿನ ಸೆಂಟ್ ಫ್ರಾನ್ಸ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಫಾಝಿಲ್ ರಹ್ಮಾನ್‌ ಸಣ್ಣಕೆರೆ ನಿವಾಸಿ ಅಬ್ದುಲ್ ರಹಿಮಾನ್ ಮತ್ತು ಜಮೀಲ ದಂಪತಿಯ ಪುತ್ರ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News