×
Ad

ಆರ್ಥಿಕ ಸಂಕಷ್ಟ: ತಡವಾಗಿ ಬಿಡುಗಡೆಯಾದ ಸೂರ್ಯ ನಟನೆಯ ‘ಕರುಪ್ಪು’

Update: 2026-05-15 18:02 IST

Photo Credit : X

ನಟ ಸೂರ್ಯ ಮಧ್ಯಪ್ರವೇಶಿಸಿ ಸಿನಿಮಾದ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಿದ ನಂತರ ಸಿನಿಮಾ ಮೇ 15ರಂದು ಬಿಡುಗಡೆಯಾಗಿದೆ.

ಸೂರ್ಯ ಅವರ ‘ಕರುಪ್ಪು’ ಸಿನಿಮಾ ಅಂತಿಮವಾಗಿ ಮೇ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಆದರೆ ನಿಗದಿತ ಬಿಡುಗಡೆ ದಿನಾಂಕಕ್ಕಿಂತ ಒಂದು ದಿನ ತಡವಾಗಿ ಬಿಡುಗಡೆಯಾಗಿದೆ. ಆರ್ಜೆ ಬಾಲಾಜಿ ನಿರ್ದೇಶನದ ಈ ಸಿನಿಮಾ ಮೇ 14ರಂದು ಬಿಡುಗಡೆಯಾಗಬೇಕಿತ್ತು. ಆದರೆ ಆರ್ಥಿಕ ಸಂಕಷ್ಟದಿಂದ ಸಿಲುಕಿದ ಕಾರಣ ಬಿಡುಗಡೆ ವಿಳಂಬವಾಗಿದೆ.

ಡ್ರೀಮ್ ವಾರಿಯರ್ ಪಿಕ್ಚರ್ಸ್ 50 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಇತ್ಯರ್ಥವಾಗದ ಬಾಕಿ ಮೊತ್ತಕ್ಕೆ ಅನುಮತಿ ಪಡೆಯಲು ವಿಫಲವಾದ ಕಾರಣ ಬಿಡುಗಡೆ ತಡೆಹಿಡಿಯಲಾಗಿತ್ತು. ಪರಿಣಾಮವಾಗಿ ಮೇ 14ರಂದು ನಿಗದಿಯಾಗಿದ್ದ ಚಿತ್ರದ ಪ್ರದರ್ಶನ ರದ್ದುಗೊಳಿಸಲಾಯಿತು. ಇದರಿಂದ ಅಭಿಮಾನಿಗಳು ಮತ್ತು ಚಿತ್ರಮಂದಿರದ ಮಾಲೀಕರ ಹತಾಶೆಗೆ ಕಾರಣವಾಗಿದೆ.

ನಂತರ ನಟ ಸೂರ್ಯ ಮಧ್ಯಪ್ರವೇಶಿಸಿ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಹೀಗಾಗಿ ಸಿನಿಮಾ ಮೇ 15ರಂದು ಬಿಡುಗಡೆಯಾಗಿದೆ. ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ವಿಳಂಬಕ್ಕಾಗಿ ಕ್ಷಮೆಯಾಚಿಸಿದೆ. “ಕೆಲವು ಪ್ರಯಾಣಗಳು ಸಮಯ ಮಾತ್ರವಲ್ಲ, ಹೃದಯವನ್ನೂ ಪರೀಕ್ಷಿಸುತ್ತಿವೆ. ಕರುಪ್ಪು ಸಿನಿಮಾಗಾಗಿ ಕಾಯುತ್ತಿದ್ದ ಮತ್ತು ವಿಳಂಬದ ನಡುವೆಯೂ ನಮ್ಮ ಮೇಲೆ ನಂಬಿಕೆ ಇರಿಸಿದ್ದ ಎಲ್ಲರ ಬಳಿಯೂ ಕ್ಷಮೆಯಾಚಿಸುತ್ತೇವೆ. ಮುಖ್ಯವಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಈ ಕಾಯುವಿಕೆ ನೋವಿನಿಮದ ಕೂಡಿತ್ತು ಎಂದು ನಮಗೆ ತಿಳಿದಿದೆ. ಈ ಸಿನಿಮಾವನ್ನು ನೀವು ಪ್ರೀತಿ ಮತ್ತು ನಿರೀಕ್ಷೆಯೊಂದಿಗೆ ಹಿಡಿದಿಟ್ಟು ಕೊಂಡಿದ್ದೀರಿ ಎಂದು ನಮಗೆ ತಿಳಿದಿದೆ” ಎಂದು ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದೆ.

“ಪ್ರತಿ ವಿಳಂಬವೂ ಬಮಗೆ ಭಾರವಾಗಿತ್ತು. ಆದರೆ ಪ್ರತಿ ಹಿನ್ನಡೆಯಲ್ಲೂ ನಿಮ್ಮ ಬೆಂಬಲ, ಸಂದೇಶ, ನಂಬಿಕೆ ಮತ್ತು ಅಂತ್ಯವಿಲ್ಲದ ಪ್ರೀತಿಯೇ ಕನಸನ್ನು ಜೀವಂತವಾಗಿರಿಸಿದೆ. ಇಂದು ಪೂರ್ಣ ಹೃದಯ ಮತ್ತು ಕೃತಜ್ಞತೆಯ ಕಣ್ಣೀರಿನೊಂದಿಗೆ ಕುರುಪ್ಪು ವಿಶ್ವಾದ್ಯಂತ ಬಿಡುಗಡೆಯಾಗುತ್ತಿರುವುದನ್ನು ಘೋಷಿಸುತ್ತಿದ್ದೇವೆ. ಈ ಸಿನಿಮಾ ನಮ್ಮ ರಕ್ತ, ಬೆವರು, ನಿದ್ದೆಯಿಲ್ಲದ ರಾತ್ರಿಗಳು, ಹೋರಾಟಗಳು ಮತ್ತು ಭಾವನೆಗಳನ್ನು ಹೊತ್ತಿದೆ. ಇನ್ನು ಮುಂದೆ ಇದು ನಮ್ಮ ಕತೆ ಮಾತ್ರವಲ್ಲ. ನಮ್ಮ ಜೊತೆಗೆ ಈ ಪ್ರಯಾಣದಲ್ಲಿ ಸೇರಿದ ನಿಮಗೆಲ್ಲರಿಗೂ ಸೇರಿದೆ. ನಮ್ಮನ್ನು ನಂಬಿದ್ದಕ್ಕಾಗಿ ಧನ್ಯವಾದಗಳು, ಚಿತ್ರಮಂದಿರದಲ್ಲಿ ಭೇಟಿಯಾಗೋಣ” ಎಂದು ಬರೆಯಲಾಗಿದೆ.

‘ಕರುಪ್ಪು’ ಚಿತ್ರವನ್ನು ಆರ್ಜೆ ಬಾಲಾಜಿ ನಿರ್ದೇಶಿಸಿದ್ದಾರೆ ಮತ್ತು ಅಶ್ವಿನ್ ರವಿಚಂದ್ರನ್, ರಾಹುಲ್ ರಾಜ್, ಟಿಎಸ್ ಗೋಪಿ ಕೃಷ್ಣನ್ ಮತ್ತು ಕರಣ್ ಅರವಿಂದ್ ಕುಮಾರ್ ಚಿತ್ರಕಥೆ ಬರೆದಿದ್ದಾರೆ. ಸೂರ್ಯ ಮತ್ತು ತೃಷಾ ಮುಖ್ಯ ಪಾತ್ರದಲ್ಲಿದ್ದರೆ, ಸ್ವಸಿಕಾ, ಇಂದ್ರನ್ಸ್, ಯೋಗಿ ಬಾಬು, ಶಿವದ, ನಾಟಿ ಸುಬ್ರಹ್ಮಣಿಯಂ ಮತ್ತು ಸುಪ್ರೀತ್ ರೆಡ್ಡಿ ನಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News