×
Ad

ಪಂಜು ಹಿಡಿದ ಸನ್ನಿ ಡಿಯೋಲ್; ರಾಷ್ಟ್ರ ವಿಭಜನೆಯ ಕತೆ ತೆರೆ ಮೇಲೆ ತರುತ್ತಿದ್ದಾರೆ ರಾಜ್‌ಕುಮಾರ್ ಸಂತೋಷಿ- ಆಮಿರ್ ಖಾನ್

Update: 2026-06-09 19:13 IST

Phhoto Credit : NDTV 

“ದ್ವೇಷ ಮತ್ತು ಭಯದ ಸಮಯದಲ್ಲಿ ಅವರು ಧೈರ್ಯವನ್ನು ಆರಿಸಿಕೊಂಡರು. 2026 ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ಬಟ್ವಾರ 1947 ವೀಕ್ಷಿಸಿ” ಎನ್ನುವ ಶೀರ್ಷಿಕೆ ಅಡಿಯಲ್ಲಿ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಆಮಿರ್ ಖಾನ್ ಪ್ರೊಡಕ್ಷನ್ಸ್ ಅವರ ‘ಬಟ್ವಾರ 1947’ ಸಿನಿಮಾದ ಮೊದಲ ನೋಟವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಸನ್ನಿ ಡಿಯೋಲ್ ನಾಯಕರಾಗಿರುವ ಸಿನಿಮಾದಲ್ಲಿ ಶಬಾನಾ ಅಝ್ಮಿ, ಪ್ರೀತಿ ಝಿಂಟಾ ಮತ್ತು ಕರಣ್ ಡಿಯೋಲ್ ನಟಿಸಿದ್ದಾರೆ.

“ದ್ವೇಷ ಮತ್ತು ಭಯದ ಸಮಯದಲ್ಲಿ ಅವರು ಧೈರ್ಯವನ್ನು ಆರಿಸಿಕೊಂಡರು. 2026 ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ಬಟ್ವಾರ 1947 ವೀಕ್ಷಿಸಿ” ಎನ್ನುವ ಶೀರ್ಷಿಕೆ ಅಡಿಯಲ್ಲಿ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸನ್ನಿ ಡಿಯೋಲ್, ಆಮಿರ್ ಖಾನ್ ಪ್ರೊಡಕ್ಷನ್ಸ್ ಮೊದಲಾಗಿ ಚಿತ್ರತಂಡ ಈ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ.

ಸುದೀರ್ಘ ಸಮಯದ ಬಳಿಕ ಪ್ರೀತಿ ಝಿಂಟಾ ಬೆಳ್ಳಿತೆರೆಗೆ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ. ಇದಕ್ಕೆ ಮೊದಲು ಅವರು ಸನ್ನಿ ಡಿಯೋಲ್ ಜೊತೆಗೆ 2001ರಲ್ಲಿ ‘ಫರ್ಜ್’ ಮತ್ತು 2003ರಲ್ಲಿ ‘ದಿ ಹೀರೋ: ಲವ್ ಸ್ಟೋರಿ ಆಫ್ ಅ ಸ್ಪೈ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅವರು 2018ರಲ್ಲಿ ‘ಭಯ್ಯಾಜಿ ಸೂಪರ್‌ಹಿಟ್‌’ ಸಿನಿಮಾದಲ್ಲಿ ಕೊನೆಯ ಬಾರಿಗೆ ನಟಿಸಿದ್ದರು.

ಬಟ್ವಾರಾ 1947 ಕತೆ ಏನು?

ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ ಸಿನಿಮಾಗೆ ಲಾಹೋರ್ 1947 ಎಂದು ಹೆಸರಿಡಲಾಗಿತ್ತು. ಆದರೆ ಅದನ್ನು ಬದಲಿಸಲು ಚಿತ್ರತಂಡ ಬಯಸಿತ್ತು. ಸಿನಿಮಾಗೆ ‘ಬಟ್ವಾರಾ’ ಎಂದು ಮರುನಾಮಕರಣ ಮಾಡಲು ಹಕ್ಕುಗಳ ಅಗತ್ಯವಿತ್ತು. ಸಲೀಂ ಅಖ್ತರ್ 1989ರ ಸಿನಿಮಾ ‘ಬಟ್ವಾರಾ’ದ ಶೀರ್ಷಿಕೆ ಹಕ್ಕುಗಳನ್ನು ಹೊಂದಿದ್ದ ಕಾರಣ ಹೆಸರಿಡಲು ಸಮಸ್ಯೆಯಾಗಿಲ್ಲ.

ಚಿತ್ರತಂಡ ‘ಲಾಹೋರ್ 1947’ ಎನ್ನುವ ಹೆಸರನ್ನು ಬದಲಿಸುವ ವಿಚಾರದಲ್ಲಿ ಸ್ಪಷ್ಟತೆ ಇತ್ತು. ಹೀಗಾಗಿ ‘ಬಟ್ವಾರ 1947’ ಎನ್ನುವ ಹೆಸರನ್ನು ಲಾಕ್ ಮಾಡಿದ್ದರು, ಆದರೆ ಅದಕ್ಕಾಗಿ ಶೀರ್ಷಿಕೆಯ ಹಕ್ಕುಗಳ ಅಗತ್ಯವಿತ್ತು. ಸ್ವತಃ ಆಮಿರ್ ಖಾನ್ ಶೀರ್ಷಿಕೆಯ ಹಕ್ಕುಗಳನ್ನು ಹೊಂದಿದ್ದ ಸಲೀಂ ಅಖ್ತರ್ ಕುಟುಂಬವನ್ನು ಭೇಟಿ ಮಾಡಿ ಹಕ್ಕುಗಳನ್ನು ಪಡೆದರು.

ಭೇಟಿ ಫಲಪ್ರದವಾಗಿತ್ತು. ಆಮಿರ್ ಖಾನ್ ಅವರು 1995ರ ‘ಬಾಜಿ’ ಸಿನಿಮಾದಲ್ಲಿ ಸಲೀಂ ಅಖ್ತರ್ ಜೊತೆಗೆ ಕೆಲಸ ಮಾಡಿದ ಅದ್ಭುತ ಅನುಭವದ ಬಗ್ಗೆ ಹೇಳಿದರು. ಅವರು ತಮ್ಮ ಸಿನಿಮಾ ಮತ್ತು ‘ಬಟ್ವಾರಾ’ ಶೀರ್ಷಿಕೆ ಹೇಗೆ ಸೂಕ್ತವಾಗಿದೆ ಎಂದು ತಿಳಿಸಿದರು. ಹೀಗೆ ನಿರ್ದಿಷ್ಟ ಮೊತ್ತಕ್ಕೆ ಸಲೀಂ ಅಖ್ತರ್ ಕುಟುಂಬ ಹಕ್ಕುಗಳನ್ನು ಮಾರಾಟ ಮಾಡಿದ್ದಾರೆ.

1989 ರ ‘ಬಟ್ವಾರಾ’ ಸಿನಿಮಾದಲ್ಲಿ ಧರ್ಮೇಂದ್ರ, ವಿನೋದ್ ಖನ್ನಾ, ಡಿಂಪಲ್ ಕಪಾಡಿಯ, ಅಮೃತಾ ಸಿಂಗ್, ಪೂನಂ ಧಿಲ್ಲಾನ್, ಮೊಹ್ಸಿನ್ ಖಾನ್, ಶಮ್ಮಿ ಕಪೂರ್ ಮತ್ತು ಆಶಾ ಪಾರೇಖ್ ನಟಿಸಿದ್ದರು. ಇದೀಗ ರಾಜ್‌ಕುಮಾರ್ ಸಂತೋಷಿ ಅವರ ಐತಿಹಾಸಿಕ ‘ಬಟ್ವಾರಾ 1947’ರಲ್ಲಿ ಸನ್ನಿ ಡಿಯೋಲ್, ಪ್ರೀತಿ ಝಿಂಟಾ, ಅಲಿ ಫಜಲ್, ಕರಣ್ ಡಿಯೋಲ್ ಮತ್ತು ಶಬಾನಾ ಅಝ್ಮಿ ಪ್ರಮುಖ ಪಾತ್ರದಲ್ಲಿದ್ದಾರೆ.

‘ಬಟ್ವಾರಾ 1947’ ಸಿನಿಮಾದಲ್ಲಿ 1947ರ ಭಾರತದ ವಿಭಜನೆಗೆ ಸಂಬಂಧಿತ ಕತೆಯನ್ನು ನಿರೂಪಿಸಲಾಗಿದೆ. ಭಾವನಾತ್ಮಕ ಪ್ರಕ್ಷುಬದ್ಧತೆ ಮತ್ತು ಅನನ್ಯತೆಯ ಪ್ರಜ್ಞೆ ಮತ್ತು ಮಾನವೀಯತೆಯ ಕಥಾವಸ್ತು ಹೊಂದಿರುವ ಸಿನಿಮಾ 2026 ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News