×
Ad

ವಿಶ್ವ ಸೈಕಲ್ ದಿನಾಚರಣೆ| ಮಂಗಳೂರಿನಲ್ಲಿ ಭವ್ಯ ಸಂಡೇಸ್ ಆನ್ ಸೈಕಲ್ ಜಾಥಾ

Update: 2026-06-07 20:50 IST

ಮಂಗಳೂರು: ಭಾರತ ಸರಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿರುವ ʼಮೇರಾ ಯುವ ಭಾರತʼ ದ.ಕ. ವತಿಯಿಂದ ವಿಶ್ವ ಸೈಕಲ್ ದಿನಾಚರಣೆಯ ಅಂಗವಾಗಿ ಹಸಿರು ಭವಿಷ್ಯಕ್ಕಾಗಿ ಸೈಕ್ಲಿಂಗ್ ಎಂಬ ಧ್ಯೇಯವಾಕ್ಯದೊಂದಿಗೆ ಭವ್ಯ ಸಂಡೇಸ್ ಆನ್ ಸೈಕಲ್  ಜಾಥಾ ರವಿವಾರ ನಡೆಯಿತು.

ಯುವಜನರಲ್ಲಿ ಆರೋಗ್ಯಕರ ಜೀವನಶೈಲಿ, ದೈಹಿಕ ಕ್ಷಮತೆ, ಪರಿಸರ ಸಂರಕ್ಷಣೆ ಹಾಗೂ ಯುವ ಸಬಲೀಕರಣದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆಸಲಾದ ಕಾರ್ಯಕ್ರಮದ ಸಹಯೋಗವನ್ನು ದ.ಕ. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್‌ಎಸ್‌ಎಸ್ ಮಂಗಳೂರು ವಿಶ್ವವಿದ್ಯಾನಿಲಯ, ಫ್ರೀಜಿಂಗ್ ಸನ್, ಮಂಗಳೂರು ಸೈಕ್ಲಿಂಗ್ ಕ್ಲಬ್, ಸುರತ್ಕಲ್ ಬೀಚ್ ರನ್ನರ್ಸ್ ಹಾಗೂ ವಿಆರ್ ಸೈಕ್ಲಿಂಗ್ ಕ್ಲಬ್ ಸಂಸ್ಥೆಗಳು ವಹಿಸಿತ್ತು.

ರವಿವಾರ ಬೆಳಗ್ಗೆ ನಗರದ ಮಂಗಳಾ ಕ್ರೀಡಾಂಗಣದಿಂದ ಸೈಕಲ್ ಜಾಥಾಕ್ಕೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಚಾಲನೆ ನೀಡಿ ಮಾತನಾಡಿದರು. ಮೇರಾ ಯುವ ಭಾರತ್ ದ.ಕ.ಜಿಲ್ಲಾ ಉಪ ನಿರ್ದೇಶಕ ಉಲ್ಲಾಸ್ ಕೆಟಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಜಗದೀಶ್ ಕೆ., ಶೇಷಪ್ಪ ಅಮೀನ್, ಚಿತ್ತರಂಜನ್ ಬೋಳಾರ್, ಪರಾಂಜಲಿ ಹಾಗೂ ಮಾರಿಯಾ, ಚಿತ್ರನಟ ದಿನೇಶ್ ಅತ್ತಾವರ, ಮಂಗಳೂರು ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ಅನಿಲ್ ಶೇಟ್, ಹರ್ನಿಶ್, ರಾಷ್ಟ್ರಮಟ್ಟದ ಸೈಕ್ಲಿಸ್ಟ್ ಹಾರ್ದಿಕ್ ರೈ ಮತ್ತಿತರರು ಭಾಗವಹಿಸಿದ್ದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News