ಮೂಡುಬಿದಿರೆ ವಲಯ ಸಂಯುಕ್ತ ಜಮಾತ್ ಕಮಿಟಿ ರಚನೆ

Update: 2026-07-30 22:39 IST

ಅಬ್ದುಲ್ ರಹ್ಮಾನ್

ಮೂಡುಬಿದಿರೆ,ಜು.30: ಮೂಡಬಿದ್ರೆ ರೇಂಜ್ ಜಮಾಅತ್ ಪ್ರತಿನಿಧಿಗಳ ಸಭೆಯು ಇಲ್ಲಿನ ಕೇಂದ್ರ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಿತು. ಮೂಡುಬಿದಿರೆ ಟೌನ್ ಮಸೀದಿಯ ಖತೀಬ್ ಮುಹಮ್ಮದ್ ಶರೀಫ್ ದಾರಿಮಿ ದುಆಗೈದರು.

ಈ ಸಂದರ್ಭ ಮೂಡುಬಿದಿರೆ ರೇಂಜ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜುಮ್ಮಾ ಮಸೀದಿಗಳ ಪ್ರತಿನಿಧಿಗಳನ್ನು ಒಗ್ಗೂಡಿಸಿ ಮೂಡುಬಿದಿರೆ ವಲಯ ಸಂಯುಕ್ತ ಜಮಾತ್ ಕಮಿಟಿಯನ್ನು ರಚಿಸಲಾಯಿತು.

ಸಮಿತಿಯ ಗೌರವ ಸಲಹೆಗಾರರಾಗಿ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ಮುಲ್ಕಿ, ಮುಹಮ್ಮದ್ ಶರೀಫ್ ದಾರಿಮಿ ಮೂಡುಬಿದಿರೆ, ಮೂಸಾ ದಾರಿಮಿ ತೋಡಾರ್, ಇಬ್ರಾಹಿಂ ದಾರಿಮಿ ಹಂಡೇಲ್, ಗೌರವಾಧ್ಯಕ್ಷ ರಾಗಿ ಎಚ್.ಎಂ. ಅಬ್ದುಲ್ ಖಾದರ್ ಹಾಜಿ ಹಂಡೇಲ್, ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ (ಅಬ್ಬುವಾಕ), ಉಪಾಧ್ಯಕ್ಷ ರಾಗಿ ಅಶ್ರಫ್ ಹಾಜಿ ಗುತ್ತು, ನಜಿಮುದ್ದೀನ್ ಅಂಗರಕರ್ಯ, ಮುಹಮ್ಮದ್ ಗಂಟಲ್ಕಟ್ಟೆ, ದಾವೂದ್ ಕಾಶಿಪಟ್ಣ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಮರೋಡಿ, ಕೋಶಾಧಿಕಾರಿಯಾಗಿ ಝಕರಿಯಾ ಯೂಸುಫ್ ವಾಲ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಲಿಯಾಕತ್ ಅಲಿ ಜ್ಯೋತಿನಗರ, ಅಬೂಬಕ್ಕರ್ ಗುಂಡುಕಲ್ಲು, ಶಂಸುದ್ದೀನ್ ತೇರೆಬಿದಿ, ಪತ್ರಿಕಾ ಪ್ರತಿನಿಧಿಗಳಾಗಿ ಮಹಮ್ಮದ್ ಶಾಫಿ ಕಿರೋಡಿ, ತಶ್ರೀಫ್ ಮರಿಯಾಡಿ ಅವರನ್ನು ಆಯ್ಕೆ ಮಾಡಲಾಯಿತು.

ಆಸಿಫ್ ಎಂಎಎಸ್, ಮುಹಮ್ಮದ್ ನದೀಂ ಪುತ್ತಿಗೆ, ಅಬ್ದುಲ್ ಗಫೂರ್ ಕೋಟೆಬಾಗಿಲು, ಶಬೀರ್ ಹಂಡೇಲ್, ಎಚ್.ಎಂ. ಅಬ್ದುಲ್ ರಝಾಕ್, ಇಸ್ಮಾಯಿಲ್ ನಸೀಮ, ಅಬ್ದುಲ್ ರಝಾಕ್ ಸಚ್ಚೆರಿಪೇಟೆ, ಫಾರೂಕ್ ಹೊಕ್ಕಾಡಿ, ಇಮ್ತಿಯಾಝ್ ಗಂಟಲ್ಕಟ್ಟೆ, ರಝಾಕ್ ಹೊಸಂಗಡಿ, ಶರೀಫ್ ಪೆರಾಡಿ, ಶಾಕಿರ್ ಪುತ್ತಿಗೆ, ಅಬ್ದುಲ್ ಖಾದರ್ ಮಕ್ಕಿ, ನಾಸಿರ್ ಅಂಗರಕರ್ಯ, ಆಬ್ದುಲ್ ರಝಾಕ್ ಬಾರ್ದಿಲ, ಹನೀಫ್ ಸಚರಿಪೇಟೆ, ಇಲ್ಯಾಸ್ ತೆರಬೀದಿ ಸದಸ್ಯರು ಗಳಾಗಿ ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News