ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ: ಮಡಿದವರಿಗೆ ಸಾಮರಸ್ಯ ಮಂಗಳೂರು ವತಿಯಿಂದ ಶ್ರದ್ಧಾಂಜಲಿ
Update: 2026-05-22 15:06 IST
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 2010ರ ಮೇ 22ರಂದು ಸಂಭವಿಸಿದ್ದ ಭೀಕರ ವಿಮಾನ ದುರಂತದಲ್ಲಿ ಮೃತಪಟ್ಟವರ ಸ್ಮರಣಾರ್ಥ ಸಾಮರಸ್ಯ ಮಂಗಳೂರು ಪದಾಧಿಕಾರಿಗಳು ತಣ್ಣೀರುಬಾವಿ ಬಳಿ ನಿರ್ಮಿಸಲಾದ ಸ್ಮಾರಕಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೇಣುಕಾ ಶೆಟ್ಟಿ, ಪ್ರತಿಭಾ ಶೆಟ್ಟಿ, ಚಿತ್ರ ಕಿಣಿ, ವಿದ್ಯಾ ಶೆಣೈ, ಮಮತಾ ಕುಡ್ವ ಸೇರಿದಂತೆ ಹಲವರು ಉಪಸ್ಥಿತರಿದ್ದು, ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.