BC Road | ಅ.4 : ಪರ್ಲಿಯಾ ನರ್ಸಿಂಗ್ ಹೋಮ್ನಲ್ಲಿ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬಂಟ್ವಾಳ : ಬಿ.ಸಿ.ರೋಡ್ - ಕೈಕಂಬದ ಪರ್ಲಿಯಾ ನರ್ಸಿಂಗ್ ಹೋಮ್ ಇದರ ವತಿಯಿಂದ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅಕ್ಟೋಬರ್ 4 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯೋಜಿಸಲಾಗಿದೆ.
ಪೆರ್ಲಿಯಾ ನರ್ಸಿಂಗ್ ಹೋಮ್‌ನ ಮಕ್ಕಳ ತಜ್ಞ ಡಾ. ಡೈಲನ್ ಡಿಸೋಜಾ ಅವರ ನೇತೃತ್ವದಲ್ಲಿ ನಡೆಯುವ ಈ ಶಿಬಿರದಲ್ಲಿ ಮಕ್ಕಳ ಆರೋಗ್ಯದ ಸಮಗ್ರ ತಪಾಸಣೆ ಹಾಗೂ ಅಗತ್ಯ ವೈದ್ಯಕೀಯ ಸಲಹೆಗಳನ್ನು ನೀಡಲಾಗುವುದು.
ಶಿಬಿರದಲ್ಲಿ ಮಕ್ಕಳ ತೂಕ, ಬೆಳವಣಿಗೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ, ಜ್ವರ, ಕೆಮ್ಮು, ನೆಗಡಿ, ಅತಿಸಾರ, ಅಲರ್ಜಿ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳ ಕುರಿತು ತಪಾಸಣೆ ಮತ್ತು ವೈದ್ಯಕೀಯ ಸಲಹೆ ನೀಡಲಾಗುವುದು. ಅಲ್ಲದೆ, ಮಕ್ಕಳ ಆಹಾರ, ಪೌಷ್ಟಿಕಾಂಶ, ಲಸಿಕೆ ಹಾಗೂ ಆರೋಗ್ಯಕರ ಬೆಳವಣಿಗೆ ಕುರಿತು ಪೋಷಕರಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುವುದು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ವೈದ್ಯರ ಸಲಹೆ ಲಭ್ಯವಿರುತ್ತದೆ. ವೈದ್ಯರು ಸೂಚಿಸುವ ರಕ್ತ ಪರೀಕ್ಷೆ ಹಾಗೂ ಎಕ್ಸ್‌ರೇ ಸೇರಿದಂತೆ ಅಗತ್ಯವಿರುವ ಪ್ರಯೋಗಾಲಯ ಪರೀಕ್ಷೆಗಳಿಗೆ ಶೇಕಡಾ 40 ರಷ್ಟು ವಿಶೇಷ ರಿಯಾಯಿತಿ ನೀಡಲಾಗುವುದು.
ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಪೋಷಕರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಮುಂಗಡ ನೋಂದಣಿಗಾಗಿ 8296321077 ಗೆ ಸಂಪರ್ಕಿಸುವಂತೆ ಪೆರ್ಲಿಯಾ ನರ್ಸಿಂಗ್ ಹೋಮ್ ಪ್ರಕಟಣೆ ತಿಳಿಸಿದೆ.