Belthangady | ದರೋಡೆ ಪ್ರಕರಣದ ಆರೋಪಿಗಳ ಖುಲಾಸೆ
Update: 2026-07-16 13:23 IST
ಸಾಂದರ್ಭಿಕ ಚಿತ್ರ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಲ್ಮಿಂಜ ಗ್ರಾಮದ ನಿಡಿಗಲ್ ನಲ್ಲಿರುವ ಕೃಷಿ ಹಾಗೂ ಧರ್ಮಸ್ಥಳ ದೇವಸ್ಥಾನದ ರೆವೆನ್ಯೂ ವಿಭಾಗದ ಮುಖ್ಯಸ್ಥರ ಮನೆಯಲ್ಲಿ ದರೋಡೆ ಮಾಡಲು ಬಂದಿದ್ದರೆಂಬ ಪ್ರಕರಣದ ಆರೋಪಿಗಳನ್ನು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಪ್ರಕರಣದಲ್ಲಿ ಆರೋಪಿಗಳಾಗಿದ್ದ ಪಿ. ಇರ್ಫಾನ್, ಚಿದಾನಂದ ಗೌಡ ಡಿ., ಮೊಹಮ್ಮದ್ ತೌಸೀಫ್, ಮೋಹನ, ನಿತಿನ್ ಕೋಟ್ಯಾನ್, ಮೊಹಮ್ಮದ್ ಆಶಿಕ್, ತೌಷಿರ್ ಎಂಬವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಮಾಟೆಯವರು ಪ್ರಾಸಿಕ್ಯೂಷನ್ ಪರ ಸುಮಾರು 15 ಮಂದಿ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದ್ದು, ಅದರಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಪ್ರಕರಣಕ್ಕೆ ಪೂರಕ ಸಾಕ್ಷಿ ನುಡಿದಿದ್ದರು.
ಆರೋಪಿಗಳ ಪರವಾಗಿ ವಕೀಲರಾದ ವೇಣುಕುಮಾರ್ ಮತ್ತು ಯುವರಾಜ್. ಕೆ ಅಮೀನ್ ವಾದಿಸಿದ್ದರು.