ಡಾ.ಇ.ಕೆ.ಎ.ಸಿದ್ದೀಕ್ ಅಡ್ಡೂರು, ಇಕ್ಬಾಲ್ ಮುಹಮ್ಮದ್ ಶೌಕತ್, ನಿಸಾರ್ ಫಕೀರ್ ಮುಹಮ್ಮದ್

ಮಂಗಳೂರು: ಅಖಿಲ ಭಾರತ ಬ್ಯಾರಿ ಪರಿಷತ್ ಇದರ ವಾರ್ಷಿಕ ಮಹಾಸಭೆ ಮಂಗಳೂರಿನ ಖಾಸಗಿ ಸಭಾಂಗಣದಲ್ಲಿ ನಡೆಯಿತು.

ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು ವರದಿ ವಾಚಿಸಿದರು. ಕೋಶಾಧಿಕಾರಿ ನಿಸಾರ್ ಫಕೀರ್ ಮುಹಮ್ಮದ್ ಲೆಕ್ಕಪತ್ರ ಮಂಡಿಸಿದರು. ಅಧ್ಯಕ್ಷ ಯುಎ ಖಾಲಿದ್ ಉಜಿರೆ ಸಂಘಟನೆಗಳ ಕಾರ್ಯಕ್ರಮಗಳ ಬಗ್ಗೆ ವರದಿ ಮಂಡಿಸಿದರು.

ಬಿ.ಎ.ಮೊಹಮ್ಮದ್ ಹನೀಫ್ ಸಂಘಟನಾ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಖಾಲಿದ್ ಉಜಿರೆ, ಅಧ್ಯಕ್ಷರಾಗಿ ಡಾ.ಇ.ಕೆ.ಎ.ಸಿದ್ದೀಕ್ ಅಡ್ಡೂರು, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಮುಹಮ್ಮದ್ ಶೌಕತ್, ಉಪಾಧ್ಯಕ್ಷರಾಗಿ ಎಮ್ ಎಚ್ ಮೊಯ್ದಿನ್ ಅಡ್ಡೂರು, ಇಬ್ರಾಹೀಮ್ ನಡುಪದವು, ಮುಹಮ್ಮದ್ ಅಶ್ರಫ್, ಕೋಶಾಧಿಕಾರಿಯಾಗಿ ನಿಸಾರ್ ಫಕೀರ್ ಮುಹಮ್ಮದ್, ಕಾರ್ಯದರ್ಶಿಗಳಾಗಿ ಅಬ್ದುಲ್ ಹಮೀದ್ ಕಿನ್ಯ, ಇಬ್ರಾಹಿಂ ಬ್ಯಾರಿ, ಬಾಷಾ ಸಾಂಬಾರ್ ತೋಟ,  ಮಾಧ್ಯಮ ಕಾರ್ಯದರ್ಶಿಯಾಗಿ ಅಬ್ದುಲ್ ಬಶೀರ್ ಕಲ್ಕಟ್ಟ, ಸಂಘಟನಾ ಕಾರ್ಯದರ್ಶಿಗಳಾಗಿ ಅಬ್ದುಲ್ ಲತೀಫ್ ಕಂದಕ್, ಅಬ್ದುಲ್ ಸಲಾಮ್ ಪಿ, ಸಲಹೆಗಾರರಾಗಿ ಬಿ ಎ. ಮುಹಮ್ಮದ್ ಹನೀಫ್, ಯೂಸುಫ್ ವಕ್ತಾರ್, ಜೆ.ಹುಸೈನ್, ಅಹ್ಮದ್ ಬಾವ ಬಜಾಲ್, ಇ.ಕೆ.ಹುಸೈನ್ ಆಯ್ಕೆಯಾದರು.

ರಿಯಾಝ್ ಅಹ್ಮದ್ ಬಂಟ್ವಾಳ,ಹುಸೈನ್ ಕೂಳೂರು ತೀರ್ಪುಗಾರರಾಗಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor