×
Ad

ಟಿ.ಸಿ.ರೋಡ್: ಶೈನಿಂಗ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಸೋಸಿಯೇಷನ್ ನಿಂದ ಆರೋಗ್ಯ ತಪಾಸಣೆ ಕೇಂದ್ರ ಉದ್ಘಾಟನೆ

Update: 2026-07-03 16:17 IST

ಉಳ್ಳಾಲ, ಜು.3: ಶೈನಿಂಗ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಸೋಸಿಯೇಶನ್, ಟಿ.ಸಿ.ರೋಡ್ ಹಳೆಕೋಟೆ ಇದರ ಕಚೇರಿಯಲ್ಲಿ ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯ ಗ್ರಾಮೀಣ ಆರೋಗ್ಯ ರಕ್ಷಣೆ ಕೇಂದ್ರದ ಸಹಯೋಗದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ ಕೇಂದ್ರ ಆರಂಭಿಸಲಾಗಿದೆ.

ಇದರ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಹಳೆಕೋಟೆ ಅಲ್ ಕರೀಂ ಜುಮಾ ಮಸೀದಿಯ ಖತೀಬ್ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ದುಆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಶಾಫಿ *ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಹಳೆಕೋಟೆ ಮಸೀದಿಯ ಉಪಾಧ್ಯಕ್ಷರಾದ ಹಾಜಿ.ಝೈನುದ್ದೀನ್, ಪಾರೂಕ್ ಯು.ಎಚ್., ಎಂ.ಎಚ್ ಇಬ್ರಾಹೀಂ, ಯು.ಎಚ್ ಅಲ್ತಾಫ್, ಅಬ್ದುಲ್ ರವೂಫ್ ಹಳೆಕೋಟೆ, ಆದಂ ಮುಸ್ಲಿಯಾರ್ ಮತ್ತಿತರರು ಭಾಗವಹಿಸಿದ್ದರು.

ಸಂಘಟನೆಯ ಉಪಾಧ್ಯಕ್ಷ ಫರ್ವೇಝ್, ಕಾರ್ಯದರ್ಶಿ ಇಮ್ತಿಯಾಝ್, ಆಸಿಫ್, ಫಯಾಝ್, ಝಹೀರ್ ಫೈಝಲ್, ಹಾರಿಸ್ ಹಾಗೂ ಇನ್ನಿತರರು ಸಹಕರಿಸಿದರು. ಶರೀಫ್ ಯು.ಬಿ. ಕಾರ್ಯಕ್ರಮ ನಿರೂಪಿಸಿದರು.

ದಿವ್ಯಾ ಮಾರ್ಗದರ್ಶನದಲ್ಲಿ ಯೆನೆಪೊಯ ಆಸ್ಪತ್ರೆಯ ಸಿಬ್ಬಂದಿ ಶಿಬಿರವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.

ಪ್ರತೀ ತಿಂಗಳ ಕೊನೆಯ ಮಂಗಳವಾರ ಅಪರಾಹ್ನ 2ರಿಂದ ಸಂಜೆ 4ರವರೆಗೆ ಶಿಬಿರ ನಡೆಯಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News