ಕೊಣಾಜೆ : ಎಳೆಯ ಮಕ್ಕಳ ಪರಿಪೂರ್ಣ ಬೆಳವಣಿಗೆಯಲ್ಲಿ ಅಂಗನವಾಡಿಯ ಪಾತ್ರ ಅತ್ಯಂತ ಮಹತ್ತರವಾದುದು. ಆಂಗ್ಲ ಶಿಕ್ಷಣದ ವ್ಯಾಮೋಹದ ನಡುವೆ ಕನ್ನಡ ಮಾಧ್ಯಮದೊಂದಿಗೆ ಅಂಗನವಾಡಿಯಲ್ಲಿ ಸಿಗುವ ಆರಂಭದ ಶಿಕ್ಷಣವೇ ಮಕ್ಕಳ ಬುದ್ದಿಶಕ್ತಿಯಲ್ಲಿ ಪರಿಣಾಮಕಾರಿಯಾಗಿರುತ್ತದೆ. ಇದೀಗ ನಡುಪದವಿನಲ್ಲಿ ಬಹಳ ಅಗತ್ಯವಾಗಿದ್ದ ನೂತನ ಅಂಗನವಾಡಿ ಕಟ್ಟಡ‌ ನಿರ್ಮಾಣ ಆಗಿದ್ದು, ಉತ್ತಮ ರೀತಿಯಲ್ಲಿ ಸದುಪಯೋಗವಾಗಲಿ ಎಂದು ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ ಅವರು ಹೇಳಿದರು.

ಅವರು ಕೈರಂಗಳ ಗ್ರಾಮದ ನಡುಪದವು ಬಳಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಮಮ್ತಾಜ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಎಲ್ಲಿ ಒಳ್ಳೆಯ ಮನಸ್ಸುಗಳು ಇರುತ್ತವೆಯೋ ಅಲ್ಲಿ ಉತ್ತಮ ಅಭಿವೃದ್ಧಿಯ ಬದಲಾವಣೆಗಳು ಕಾಣುತ್ತೇವೆ. ಅಂಗನನಾಡಿ ಎಂದರೆ ಮಹಿಳೆಯರ ಮತ್ತು ಮಕ್ಕಳ ಸ್ನೇಹಿ ಕೇಂದ್ರ ವಾಗಿದೆ. ಮಗುವಿಗೆ ಆರಂಭದ ಶಿಕ್ಷಣದೊಂದಿಗೆ ಗರ್ಭಿಣಿಯರಿಗೆ, ಬಾಣಂತಿಯರಿಗೆ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಅಂಗನವಾಡಿ ಪಾತ್ರ ಪ್ರಮುಖವಾದುದು ಎಂದರು.

‌ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಇಸ್ಮಾಯಿಲ್ ನಡುಪದವು ಅವರು ಮಾತನಾಡಿ, ಅಂಗನವಾಡಿ ಕೇಂದ್ರ ನಾಡಿನ ಅಭಿವೃದ್ಧಿಯ ಕೇಂದ್ರ, ಸಣ್ಣ ಮಕ್ಕಳ ಕೇಂದ್ರ ಮಾತ್ರವಲ್ಲ ಗರ್ಭಿಣಿಯರಿಗೆ, ಬಾಣಂತಿಯರಿಗೆ ,‌ ಎಳೆಯ ಮಕ್ಕಳಿಗೆ ಪೌಷ್ಟಿಕಾಂಶವನ್ನು ಕೊಡುವ ಆರೋಗ್ಯ ಕೇಂದ್ರವೂ ಹೌದು. ಮಕ್ಕಳ ಸಾಮಾಜಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಯಲ್ಲಿ ಅಂಗನವಾಡಿ ಕೇಂದ್ರದ ಪಾತ್ರ ಪ್ರಮುಖವಾದುದು ಎಂದರು.

ಬಾಳೆಪುಣಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ‌ ಶೈಲಾ ಕೆ ಕಾರಗಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಗ್ರಾಮಸ್ಥರ, ಜನಪ್ರತಿನಿಧಿಗಳ ಸಹಕಾರದಿಂದ ಈ ಸುಂದರ ಕಟ್ಟಡವು ನಿರ್ಮಾಣಗೊಂಡಿದೆ ಎಂದರು.

ಮುಡಿಪು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಇಬ್ರಾಹಿಂ ನಡುಪದವು, ನಡುಪದವು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎಂ.ಶರೀಪ್ ಪಟ್ಟೋರಿ, ಮಾಜಿ ತಾ.ಪಂ.ಸದಸ್ಯ ಹೈದರ್ ಕೈರಂಗಳ, ಉದ್ಯಮಿ ಅಬ್ದುಲ್ ನಾಸೀರ್ ಕೆ. ಕೆ. ಎಸ್ ನಡುಪದವು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಪಿ , ಪಂಚಾಯತ್ ಸದಸ್ಯ ನಝರ್ ಷಾ ಪಟ್ಟೋರಿ, ಅಬ್ದುಲ್ ಜಲೀಲ್ ಮೊಂಟೆಪದವು, ಕೈರಂಗಳ ಗ್ರಾಮ ಆಡಳಿತಾಧಿಕಾರಿ ಲಿಂಗಪ್ಪ, ಮುಡಿಪು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಇಬ್ರಾಹಿಂ ನಡುಪದವು, ಅಬ್ದುಲ್ ಎಂ.ಎನ್ ನಡುಪದವು, ಪುರುಷೋತ್ತಮ ನಾಯ್ಕ್, ಮೊಯ್ದಿನ್ ಚೆಂಬೆತೋಟ, ಪುತ್ತು ಹಾಜಿ ನಡುಪದವು, ಅಂಗನವಾಡಿ ನಿವೃತ್ತ ಸಹಾಯಕಿ ಪಾರ್ವತಮ್ಮ ಮೊದಲಾದವರು ಉಪಸ್ಥಿತರಿದ್ದರು.

ಅಂಗನವಾಡಿ ಮೇಲ್ವೀಚಾರಕಿ ಶಂಕರಿ ಅವರು ಸ್ವಾಗತಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎಂ.ಶರೀಪ್ ಪಟ್ಟೋರಿ ವಂದಿಸಿದರು. ಶಿಕ್ಷಕಿ ಕಾವ್ಯ ಅವರು ನಿರೂಪಿಸಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಅಂಗನವಾಡಿ ಸಹಾಯಕಿ ಪಾರ್ವತಮ್ಮ, ಅಂಗನಾಡಿಯ ನಿವೃತ್ತ ಶಿಕ್ಷಕಿ ಜಯಂತಿ, ಗುತ್ತಿಗೆದಾರ ಸರ್ಫ್ರಾಜ್ , ಅಬ್ದುಲ್ ನಾಸೀರ್ ಎನ್ .ಎಸ್, ಸಿ.ಎಂ. ಶರೀಪ್ ಚೆಂಬೆತೋಟ, ಅಂಗನವಾಡಿ ಶಿಕ್ಷಕಿ ಉಷಾ, ಅಂಗನವಾಡಿ ಸಹಾಯಕಿ ಸವಿತಾ, ಆಶಾ ಕಾರ್ಯಕರ್ತೆ ಉಷಾ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor