ಕಲ್ಲಡ್ಕ : ಕೆ.ಪಿ. ಟ್ರಸ್ಟ್ ವತಿಯಿಂದ ಆಂಬುಲೆನ್ಸ್ ಲೋಕಾರ್ಪಣೆ; ರಕ್ತದಾನ ಶಿಬಿರ
ಮಂಗಳೂರು, ಆ.18: ಕೆ.ಪಿ ಟ್ರಸ್ಟ್ ವತಿಯಿಂದ ಆಂಬುಲೆನ್ಸ್ ಲೋಕಾರ್ಪಣೆ ಹಾಗೂ ಯೆನಪೋಯ ಆಸ್ಪತ್ರೆ ದೇರಳಕಟ್ಟೆಯ ಸಹಯೋಗದಲ್ಲಿ ರಕ್ತದಾನ ಶಿಬಿರವು ಕಲ್ಲಡ್ಕದ ಹ್ಯಾಪಿ ಸ್ಟಾರ್ ಟವರ್ನಲ್ಲಿ ನಡೆಯಿತು.
ಕಲ್ಲಡ್ಕ ಮುಹಿದ್ದೀನ್ ಜುಮಾ ಮಸೀದಿಯ ಖತೀಬ್ ಸಯ್ಯದ್ ಅಲೀ ಮನ್ನಾನಿ ದುಆ (ಪ್ರಾರ್ಥನೆ) ನೆರವೇರಿಸಿ, ಜಾತಿ, ಮತ ಧರ್ಮದ ಚೌಕಟ್ಟಗಳನ್ನು ಮೀರಿ ಮಾನವೀಯ ಸಂಬಂಧವನ್ನು ವೃದ್ದಿಸಿಕೊಳ್ಳಬೇಕು ಎಂಬ ಸಂದೇಶ ನೀಡಿದರು.
ಉದ್ಯಮಿ ಹಾಜಿ ಅಬೂಬಕರ್ ಗೋಳ್ತಮಜಲು ಆಂಬುಲೆನ್ಸ್ ಲೋಕಾರ್ಪಣೆಗೊಳಿಸಿದರು. ಹ್ಯಾಪಿ ಸ್ಟಾರ್ ಟವರಿನ ಉಮ್ಮರ್ ಫಾರೂಕ್ ಆ್ಯಂಬುಲೆನ್ಸ್ ಕೀ ಹಸ್ತಾಂತರಿಸಿದರು.
ಹಾಜಿ ಜೆ.ಕೆ ಮುಹಮ್ಮದ್ ಹಂಡೇಲ್, ಕೆ.ಎಂ ಮುಜೀಬ್ ರಹ್ಮಾನ್, ಎಚ್.ಕೆ.ಇಬ್ರಾಹೀಂ, ಹಾಜಿ ಎಚ್.ಕೆ .ಹಸನ್, ಹಾಜಿ ಅಬ್ದುಲ್ಲಾ ಕೋಡಿ, ಡಾ.ರವಿಕಿರಣ್, ಮುಹಮ್ಮದ್ ಇಮ್ತಿಯಾಝ್, ಮುಹಮ್ಮದ್ ಫಿರೋಝ್, ಜಿ.ಎಸ್ ಸಿದ್ದೀಕ್, ನವಾಝ್ ಕೆ.ಎನ್, ಮುಹಮ್ಮದ್ ಮಾಲಿಕ್, ಪತ್ರಿಕಾ ಏಜೆಂಟ್ ಅಬ್ದುಲ್ ಖಾದರ್, ಯೂಸುಫ್ ಹೈದರ್ ಹಾಗೂ ಅಬ್ದುಲ್ ಮುತ್ತಲಿಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಾಜಮುಖಿ ಸೇವೆಯಲ್ಲಿ ಗುರುತಿಸಿಕೊಂಡಿರುವ ನಾಟಿ ವೈದ್ಯಅಬ್ದುಲ್ ಹಕೀಂ ಬಹದ್ದೂರ್ ಕೆ.ಎಂ ಮುಜೀಬ್ರಹ್ಮಾನ್ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ರಕ್ತದಾನ ಮಾಡುವ ಮೂಲಕ ಮುಹಮ್ಮದ್ ಸಮೀರ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಅಬೂಬಕರ್ ಸಿದ್ದೀಕ್ ಸ್ವಾಗತಿಸಿ ವಂದಿಸಿದರು, ಮನ್ಸೂರ್ ಕೆ.ಪಿ ನಿರೂಪಿಸಿದರು.