ಮಂಗಳೂರು, ಅ.15:  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲು ಗುರುವಾರ ಮಂಗಳೂರಿಗೆ ಆಗಮಿಸಿದ್ದು, ರಾತ್ರಿ ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನಕ್ಕೆ ಆಗಮಿಸಿ ಮಂಗಳೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ನವೀಕರಣದ ರೂವಾರಿ, ಮಾಜಿ ವಿತ್ತಸಚಿವ ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ , ವಿಧಾನ ಸಭಾ ಉಪ ಸಭಾಪತಿ ಮಾಂಕಳ ವೈದ್ಯ, ಸಂಸದ ಬ್ರಿಜೇಶ್ ಚೌಟ, ಮಾಜಿ ಸಚಿವ ಬಿ.ರಮಾನಾಥ ರೈ, ಅಭಯ ಚಂದ್ರ ಜೈನ್ , ವಿನಯ ಕುಮಾರ್ ಸೊರಕೆ, ಶಾಸಕ ಮಂಜುನಾಥ ಭಂಡಾರಿ, ಐವನ್ ಡಿ ಸೋಜ, ಶಾಸಕ ವೇದವ್ಯಾಸ ಕಾಮತ್, ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸಂತೋಷ್ ಶೆಟ್ಟಿ , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಮಮತಾ ಗಟ್ಟಿ, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್‌ ಎಚ್‌. ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್‌, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್‌ ಆರ್‌.ಪೂಜಾರಿ, ಕ್ಷೇತ್ರಾಡಳಿತ ಮಂಡಳಿ ಟ್ರಸ್ಟಿಗಳಾದ ಎಚ್‌.ಎಸ್‌. ಸಾಯಿರಾಂ, ಸಂತೋಷ್‌ ಕುಮಾರ್‌ ಜೆ., ಜಗದೀಪ್‌ ಡಿ. ಸುವರ್ಣ, ಕೃತಿನ್‌ ಅಮೀನ್‌, ಕಿಶೋರ್‌ ದಂಡೆಕೇರಿ, ಪ್ರಮುಖರಾದ ಮಾಲತಿ ಜನಾರ್ದನ ಪೂಜಾರಿ, ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ. ಅನಸೂಯ ಬಿ.ಟಿ. ಸಾಲಿಯಾನ್, ಉಪಾಧ್ಯಕ್ಷ ಡಾ. ಬಿ.ಜಿ. ಸುವರ್ಣ, ಸದಸ್ಯರಾದ ವೇದ ಕುಮಾರ್, ಕೆ. ಚಿತ್ತರಂಜನ್ ಗರೋಡಿ, ಹರೀಶ್ ಕುಮಾರ್ ಬೆಳ್ತಂಗಡಿ, ವಿಶ್ವನಾಥ ಕಾಸರಗೋಡು, ಎಸ್. ಜಯ ವಿಕ್ರಮ್, ಜಿತಿನ್ ಅತ್ತಾವರ, ಹರಿಕೃಷ್ಣ ಬಂಟ್ವಾಳ, ಎನ್.ಹರೀಶ್ಚಂದ್ರ, ರಾಮನಾಥ್ ಕಾರಂದೂರು, ಧೂಮಪ್ಪ ಮೇಸ್ತ್ರಿ, ಲೀಲಾಕ್ಷ ಕರ್ಕೇರ, ಶೈಲೇಂದ್ರ ವೈ.ಸುವರ್ಣ, ಸೂರ್ಯ ಕಾಂತ್‌ ಜೆ. ಸುವರ್ಣ, ರಾಧಾಕೃಷ್ಣ, ಚಂದನ್ ದಾಸ್, ಡಿ.ಡಿ. ಕಟ್ಟೆಮಾರ್, ಪಿ.ಕೆ. ಗೌರವಿ ರಾಜಶೇಖರ್, ಬಿ. ವಾಸುದೇವ ಕೋಟ್ಯಾನ್, ಲತೀಶ್ ಎಂ.ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor