ಮಂಗಳೂರು: ಆದ್ಯ ಅನಿಲ್ ಕುಮಾರ್ ಗೆ ಬ್ಲ್ಯಾಕ್ ಬೆಲ್ಟ್

Update: 2024-05-09 11:51 GMT

ಮಂಗಳೂರು: ಇನ್ಸ್ಟಿಟ್ಯೂಟ್ ಆಫ್ ಕರಾಟೆ & ಅಲೈಡ್‌ ಆರ್ಟ್ಸ್ ವತಿಯಿಂದ ಮೇ 5 ರಂದು ಉಡುಪಿಯಲ್ಲಿ ನಡೆದ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಮಂಗಳೂರಿನ ಆದ್ಯ ಅನಿಲ್ ಕುಮಾರ್ ಅವರು ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ.

ಬುಡೋಕಾನ್‌ ಕರಾಟೆ ಇಂಟರ್ನ್ಯಾಶನಲ್ ಇದರ ಕಾರ್ಯದರ್ಶಿ ಹನ್ಷಿ ಪ್ರವೀಣ್‌ ಕುಮಾರ್ ಅವರು ಬ್ಲ್ಯಾಕ್ ಬೆಲ್ಟ್ ಹಾಗೂ ಪ್ರಮಾಣ ಪತ್ರವನ್ನು ಪ್ರದಾನ ಮಾಡಿದರು.

ಆದ್ಯ ಅನಿಲ್ ಕುಮಾರ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ & ಅಲೈಡ್ ಆರ್ಟ್ಸ್ ಇದರ ಕೆನರಾ ಸಿ ಬಿ.ಎಸ್.ಸಿ. ಶಾಲೆಯಲ್ಲಿ ಸೆನ್ಸಿ ಶೈನ್ ಕುಮಾರ್ ಹಾಗೂ ಸೆನ್ಸಿ ಮಾರುತ್ ಆಳ್ವ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

ಆದ್ಯ ಅವರು ವಾಣಿಶ್ರೀ ಮತ್ತು ಅನಿಲ್ ಕುಮಾರ್‌ ದಂಪತಿಯ ಪುತ್ರ. ಉಡುಪಿಯಲ್ಲಿ ನಡೆದ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಇನ್ಸ್ಟಿಟ್ಯೂಟ್‌ ನ 103 ಕರಾಟೆ ಪಟುಗಳು ಬ್ಲ್ಯಾಕ್ ಬೆಲ್ಟ್ ಹಾಗೂ ಉನ್ನತ ಶ್ರೇಣಿಗಳಿಗೆ ತೇರ್ಗಡೆ ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News