ಮಂಗಳೂರು | ನಗರದ ಅತ್ಯಂತ ಹಳೆಯ ಗಾಂಧಿ ಪಾರ್ಕಿನ ಅಭಿವೃದ್ಧಿ ಶೀಘ್ರದಲ್ಲಿ : ಶಾಸಕ ವೇದವ್ಯಾಸ ಕಾಮತ್

Update: 2023-09-09 09:23 GMT

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಅತ್ಯಂತ ಹಳೆಯ ಪಾರ್ಕ್ ಎಂಬ ಹೆಗ್ಗಳಿಕೆ ಹೊಂದಿರುವ ಗಾಂಧಿನಗರ ಪಾರ್ಕ್ ಶಿಥಿಲಾವಸ್ಥೆಯಲ್ಲಿದ್ದು ಶಾಸಕ ವೇದವ್ಯಾಸ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದಿದ್ದ ಈ ಪಾರ್ಕ್ ನಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತಿರುವುದರಿಂದ ಇಲ್ಲಿ ದಿನನಿತ್ಯ ವಾಕಿಂಗ್ ಮಾಡುವ ಹಿರಿಯರು, ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಸ್ಥಳೀಯರಿಂದ ಮಾಹಿತಿ ಪಡೆದ ಶಾಸಕರು ಸ್ಥಳ ವೀಕ್ಷಣೆ ನಡೆಸಿ ಇಂಜಿನಿಯರ್ ಸಮ್ಮುಖದಲ್ಲಿ ಪಾರ್ಕಿನ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಯೋಜನೆಯ ರೂಪುರೇಷೆ ಸಿದ್ಧಪಡಿಸಿ ಶೀಘ್ರ ಕಾಮಗಾರಿ ಆರಂಭಿಸಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕ್ರೀಡಾಭಿಮಾನಿಗಳಾದ ವಸಂತ್, ದೇವರಾಜ, ತರುಣ್, ಧೀರಜ್, ಪಾರ್ಕ್ ಕಮಿಟಿ ಸದಸ್ಯರುಗಳಾದ ನಂದಾ ಶೆಣೈ, ಅಜಿತ್ ರಾವ್, ವೆಂಕಟೇಶ್ ಆಚಾರ್, ಮೋಹನ್ ಆಚಾರ್, ಸ್ಥಳೀಯ ಕಾರ್ಪೊರೇಟರ್ ಸಂಧ್ಯಾ ಆಚಾರ್, ಪವನ್ ಶೆಣೈ, ಆನಂದ ರೈ, ವಸಂತ್ ಪೂಜಾರಿ, ಭಾಸ್ಕರ ಚಂದ್ರ ಶೆಟ್ಟಿ, ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News