ಮಂಗಳೂರು| ರೋಹನ್ ಕಾರ್ಪೊರೇಶನ್ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಶಾರುಖ್ ಖಾನ್‌ಗೆ ಅದ್ದೂರಿ ಸ್ವಾಗತ
ನಮಸ್ಕಾರ ಕುಡ್ಲಾ... ಎಂಚ ಉಲ್ಲರ್ ಎಂದ ಬಾಲಿವುಡ್‌ನ ಖ್ಯಾತ ನಟ
ಮಂಗಳೂರು, ಜೂ.25: ಮಂಗಳೂರು ನಗರದ ಹೊರ ವಲಯದ ಅಡ್ಯಾರ್ ಐತಿಹಾಸಿಕ ಕಾರ್ಪೊರೇಟ್ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು.
ನಗರದ ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ‘ರೋಹನ್ ಕಾರ್ಪೊರೇಷನ್’ ವತಿಯಿಂದ ಅಡ್ಯಾರ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿದ್ದ ‘‘ಆನ್ ಈವನಿಂಗ್ ವಿತ್ ಶಾರುಖ್ ಖಾನ್’’ ಭವ್ಯ ಸಮಾರಂಭದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕರಾವಳಿ ಜನತೆಯನ್ನು ಮಂತ್ರಮುಗ್ಧರನ್ನಾಗಿಸಿದರು.
ಗಣ್ಯರು, ಉದ್ಯಮಿಗಳು, ವಿಐಪಿಗಳು ಹಾಗೂ ವಿಶೇಷ ಪಾಸ್‌ಗಳ ಮೂಲಕ ಆಗಮಿಸಿದ ಸಾರ್ವಜನಿಕರನ್ನೊಳ ಗೊಂಡಂತೆ ಭಾರಿ ಜನಸ್ತೋಮ ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಯಿತು. ಸಂಜೆ 5 ಗಂಟೆಗೆ ಆರಂಭವಾದ ಈ ಸಾಂಸ್ಕೃತಿಕ ಹಾಗೂ ಉದ್ಯಮ ರಂಗದ ಮಹಾಸಂಗಮ ರಾತ್ರಿ 9 ಗಂಟೆಯವರೆಗೆ ನೆರೆದಿದ್ದವರಲ್ಲಿ ಹೊಸ ಹುರುಪು ತುಂಬಿತು.
ಸಾಂಸ್ಕೃತಿಕ ವೈಭವ - ಸಲ್ಮಾನ್ ಅಲಿ ಲೈವ್ ಶೋ
ಕಾರ್ಯಕ್ರಮದ ಆರಂಭದಲ್ಲಿ ಕರಾವಳಿಯ ಪ್ರಸಿದ್ಧ ಕಲಾ ತಂಡಗಳಿಂದ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನಗಳು ಜರುಗಿದವು. ಇದರ ಬೆನ್ನಲ್ಲೇ ‘ಇಂಡಿಯನ್ ಐಡಲ್’ ವಿಜೇತ ಪ್ರಸಿದ್ಧ ಗಾಯಕ ಸಲ್ಮಾನ್ ಅಲಿ ತಮ್ಮ ಅದ್ಭುತ ಕಂಠಸಿರಿಯ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ರೋಹನ್ ಮರೀನಾ ಒನ್’ ಮರು ಚಾಲನೆ: ‘ ಇದೇ ಸಂದರ್ಭ ರೋಹನ್ ಕಾರ್ಪೊರೇಷನ್‌ನ ಮಹತ್ವಾಕಾಂಕ್ಷೆಯ ಐಷಾರಾಮಿ ವಾಟರ್‌ಫ್ರೆಂಟ್ ವಸತಿ ಯೋಜನೆ ‘ರೋಹನ್ ಮರೀನಾ ಒನ್’ ಯೋಜನೆಗೆ ಶಾರುಖ್ ಖಾನ್ ಸಮ್ಮುಖದಲ್ಲಿ ಅದ್ಧೂರಿ ಮರುಚಾಲನೆ ನೀಡಲಾಯಿತು.
ಶಾರುಖ್ ಖಾನ್ ಕೋಟ್ಯಂತರ ಜನರಿಗೆ ಸ್ಪೂರ್ತಿ:-
‘‘ಶಾರುಖ್ ಖಾನ್ ಅವರ ಸಾಮಾನ್ಯ ಜೀವನದಿಂದ ಜಾಗತಿಕ ತಾರೆಯಾಗಿ ಬೆಳೆದ ಪಯಣ ಕೋಟ್ಯಂತರ ಜನರಿಗೆ ಸ್ಪೂರ್ತಿ ನೀಡಿದೆ. ನಮ್ಮ ಸಂಸ್ಥೆ ಮತ್ತು ಈ ನಗರದ ಯುವ ಜನರಲ್ಲಿ ಅದೇ ಸಾಧನೆಯ ಛಲವನ್ನು ನಾವಿಂದು ಕಾಣಬಹುದು’’
-ಡಾ. ರೋಹನ್ ಮೊಂತೇರೊ, ವ್ಯವಸ್ಥಾಪಕ ನಿರ್ದೇಶಕರು, ರೋಹನ್ ಕಾರ್ಪೊರೇಷನ್
‘‘ಮಂಗಳೂರು ಎಂದೆಂದಿಗೂ ನೆನಪಿನಲ್ಲಿಟ್ಟುಕೊಳ್ಳುವಂತಹ ಅನುಭವ ನೀಡುವುದು ನಮ್ಮ ಆಶಯವಾಗಿತ್ತು. ಶಾರುಖ್ ಖಾನ್ ಅವರ ಉಪಸ್ಥಿತಿ ನಮ್ಮ ಸಂಸ್ಥೆಯ ಇತಿಹಾಸದಲ್ಲೇ ಮೈಲಿಗಲ್ಲು’’
-ಡಿಯೋನ್ ಮೊಂತೇರೊ ನಿರ್ದೇಶಕರು, ರೋಹನ್ ಕಾರ್ಪೊರೇಷನ್
ಕರಾವಳಿ ಜನರ ಪ್ರೀತಿಯನ್ನು ಶ್ಲಾಘಿಸಿದ ಬಾದ್‌ಷಾ...
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಶಾರುಖ್ ಖಾನ್ ಅವರು ಡಾ. ರೋಹನ್ ಮೊಂತೇರೊ ಮತ್ತು ಡಿಯೋನ್ ಮೊಂತೇರೊ ಅವರೊಂದಿಗೆ ಸಂವಾದ ನಡೆಸಿದರು.
ತಮ್ಮ ಎಂದಿನ ಚತುರತೆ ಹಾಗೂ ಹಾಸ್ಯದ ಮೂಲಕ ಪ್ರೇಕ್ಷಕರ ಮನಗೆದ್ದ ಕಿಂಗ್ ಖಾನ್, ಮಂಗಳೂರಿನ ಸಂಸ್ಕೃತಿ ಮತ್ತು ಕರಾವಳಿ ಜನರ ಪ್ರೀತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
‘‘ನಮಸ್ಕಾರ ಕುಡ್ಲಾ.., ಎಂಚ ಉಲ್ಲಾರ್ ’’ ಎಂದು ಮಾತು ಆರಂಭಿಸಿದ ಶಾರೂಖ್ ಖಾನ್ ಅವರು ಮಂಗಳೂರಿನಲ್ಲಿ ತನ್ನ ಅಜ್ಜನ ಮನೆಯಲ್ಲಿ ತಾನು ಚಿಕ್ಕವನಿದ್ದಾಗ ಕಳೆದ ದಿನಗಳನ್ನು ನೆನಪಿಸಿಕೊಂಡರು.
ಯುವಜನತೆ ದೊಡ್ಡ ಕನಸುಗಳನ್ನು ಕಾಣಬೇಕು, ಕಠಿಣ ಪರಿಶ್ರಮ ಪಡಬೇಕು ಮತ್ತು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು ಎಂದು ಕರೆ ನೀಡಿದರು.
ಸಾಹಿಲ್ ಝಹೀರ್ ಮತ್ತು ಆರ್.ಜೆ ಡೋನಾ ಕಾರ್ಯಕ್ರಮ ನಿರೂಪಿಸಿದರು.
*ರೋಹನ್ ಕಾರ್ಪೊರೇಷನ್ ಬಗ್ಗೆ: 1994 ರಲ್ಲಿ ಸ್ಥಾಪನೆಯಾದ ರೋಹನ್ ಕಾರ್ಪೊರೇಷನ್ ಮಂಗಳೂರಿನ ಅತ್ಯಂತ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಸಂಸ್ಥೆಯಾಗಿದ್ದು, ಕಳೆದ ಮೂರು ದಶಕಗಳಲ್ಲಿ 25ಕ್ಕೂ ಹೆಚ್ಚು ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸಿ 7,000ಕ್ಕೂ ಹೆಚ್ಚು ಕುಟುಂಬಗಳ ನಂಬಿಕೆಗೆ ಪಾತ್ರವಾಗಿದೆ.