×
Ad

ಮೂಡುಬಿದಿರೆ: ಅಲ್ಫಿಯಾ ಸಯೀದ್‌ ಗೆ PhD ಪದವಿ

Update: 2026-06-06 21:59 IST

ಮೂಡುಬಿದಿರೆ: ಇಲ್ಲಿನ ಅಲ್ಫಿಯಾ ಸಯೀದ್ ಅವರು, ಜೆನ್ ಝೀ ಗ್ರಾಹಕರಲ್ಲಿ ಆನ್‌ಲೈನ್ ಶಾಪಿಂಗ್‌ ನಲ್ಲಿ AR ತಂತ್ರಜ್ಞಾನಗಳ ಅಳವಡಿಕೆ ಕುರಿತು ನಡೆಸಿದ ಸಂಶೋಧನೆಗಾಗಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಸಯೀದ್ ರಫೀಕ್ ಮತ್ತು ಬೀಬಿ ಸಾರಾ ದಂಪತಿಯ ಪುತ್ರಿಯಾಗಿರುವ ಅಲ್ಫಿಯಾ, ಮಣಿಪಾಲದ ಮಾಹೆಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್, ಹ್ಯುಮಾನಿಟೀಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಡಾ. ಆಶಿಶ್ ಉಮ್ಮನ್ ಮ್ಯಾಥ್ಯೂ ಅವರ ಮಾರ್ಗದರ್ಶನ ಹಾಗೂ ಡಾ. ಲೆವ್ಲಿನ್ ಎಲ್.ಆರ್. ರೊಡ್ರಿಗಸ್ ಅವರ ಸಹ-ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.

ಅಲ್ಫಿಯಾ ಅವರು 2000ರಲ್ಲಿ ದುಬೈನ ಅವರ್ ಓನ್ ಇಂಗ್ಲಿಷ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ್ದು, ಬಳಿಕ ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 2010ರಲ್ಲಿ ಮಂಗಳೂರಿನ ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಅವರು, 2012ರಲ್ಲಿ ಮೂಡುಬಿದಿರೆಯ MITEಯಿಂದ ಮಾರ್ಕೆಟಿಂಗ್‌ ನಲ್ಲಿ MBA ಪದವಿ ಪಡೆದಿದ್ದಾರೆ. 2013ರಿಂದ ಅವರು ಯುಎಇಯಲ್ಲಿ ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News