ಮಂಗಳೂರು: ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (NBEMS) NEET PG 2026ರ ಫಲಿತಾಂಶವನ್ನು ಪ್ರಕಟಿಸಿದೆ. ಮಂಗಳೂರಿನ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡಾ. ಅಫ್ಲಾ ರಫೀಕ್ ಅವರು NEET- PG 2026 ಪರೀಕ್ಷೆಯಲ್ಲಿ 614/720 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ 21ನೇ ರ‍್ಯಾಂಕ್ (AIR) ಗಳಿಸಿದ ಸಾಧನೆ ಮಾಡಿದ್ದಾರೆ.

NBEMSನ ಮಾಹಿತಿಯ ಪ್ರಕಾರ, ಪರೀಕ್ಷೆಗೆ ಒಟ್ಟು 2,73,096 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 2,65,980 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಪ್ರಸಕ್ತ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ MBBS ಇಂಟರ್ನ್ಶಿಪ್ ಮಾಡುತ್ತಿರುವ ಡಾ. ಅಫ್ಲಾ ರಫೀಕ್ ಅವರು, MBBS ಪದವಿಯಲ್ಲಿ 13 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ರೇಡಿಯಾಲಜಿಯಲ್ಲಿ ಸ್ನಾತಕೋತ್ತರ (PG) ಶಿಕ್ಷಣ ಪಡೆಯುವ ಗುರಿ ಹೊಂದಿದ್ದಾರೆ.

ಬಜ್ಪೆಯ ಅನ್ಸಾರ್ ಶಾಲೆಯಲ್ಲಿ 8ನೇ ತರಗತಿಯವರೆಗೆ ವ್ಯಾಸಾಂಗ ಮಾಡಿದ ಅಫ್ಲಾ ರಫೀಕ್ ಬಳಿಕ ಮಂಗಳೂರಿನ ಸೈಂಟ್ ಮೇರಿಸ್ ಪ್ರೌಢ ಶಾಲೆಯಲ್ಲಿ SSLCಯಲ್ಲಿ 97% ಅಂಕಗಳೊಂದಿಗೆ ತೇರ್ಗಡೆಯಾದರು. ಬಳಿಕ ಮಂಗಳೂರಿನ ಶ್ರೀ ಚೈತನ್ಯ ಪಿಯು ಕಾಲೇಜಿನಲ್ಲಿ 96% ಅಂಕಗಳೊಂದಿಗೆ ರ್ಯಾಂಕ್ ಗಳಿಸಿದರು.

ಮೂಲತಃ ಬಜ್ಪೆಯವರಾದ ಡಾ. ಅಫ್ಲಾ ರಫೀಕ್, ಮಹಮ್ಮದ್ ರಫೀಕ್ ಮತ್ತು ಫಾತಿಮಾ ರಫೀಕ್ ದಂಪತಿಗಳ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor