ಬಜ್ಪೆ: ‘ಫಾರ್ಚೂನ್ ಗ್ಯಾಲಕ್ಸಿ’ ವಸತಿ, ವಾಣಿಜ್ಯ ಸಂಕೀರ್ಣಕ್ಕೆ ಶಿಲಾನ್ಯಾಸ

Update: 2024-04-28 16:56 GMT

ಬಜ್ಪೆ, ಎ.28: ಮೂಡುಬಿದಿರೆಯ ಪ್ರತಿಷ್ಠಿತ ಫಾರ್ಚೂನ್ ಪ್ರಮೋಟರ್ಸ್ ಬಜ್ಪೆಯ ಪ್ರೊಪೆಲ್ ಆಟೊ ಎಲ್‌ಪಿಜಿ ಸ್ಟೇಷನ್ ಸಮೀಪ ನಿರ್ಮಿಸಲಿರುವ ವಸತಿ ಮತ್ತು ವಾಣಿಜ್ಯ ಸಂಕೀರ್ಣ ‘ಫಾರ್ಚೂನ್ ಗ್ಯಾಲಕ್ಸಿ’ಗೆ ರವಿವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಶಿಲಾನ್ಯಾಸದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಜ್ಪೆ ನಗರ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ನಿರ್ಮಾಣದ ಎಲ್ಲ ಕಾನೂನಾತ್ಮಕ ಸುಭದ್ರ ಕಟ್ಟಡಗಳನ್ನು ನೀಡುತ್ತಿರುವ ಕೀರ್ತಿ ಫಾರ್ಚೂನ್ ಪ್ರಮೋಟರ್ಸ್‌ಗೆ ಸಲ್ಲುತ್ತದೆ ಎಂದು ಹೇಳಿದರು.


ಕರ್ನಾಟಕ ರಾಜ್ಯ ಸಭಾಧ್ಯಕ್ಷ ಯು.ಟಿ.ಖಾದರ್, ಫಾರ್ಚೂನ್ ಪ್ರಮೋಟರ್ಸ್‌ನ ಬ್ರೋಚರ್ ಬಿಡುಗಡೆಗೊಳಿಸಿ ಮಾತನಾಡಿ, ಫಾರ್ಚೂನ್ ಗ್ಯಾಲಕ್ಸಿ ತಲೆ ಎತ್ತಿದ ಬಳಿಕ ಬಜ್ಪೆಯ ಪ್ರಕೃತಿಯ ಸೌದರ್ಯ ಹೆಚ್ಚಾಗಲಿದೆ. ಕಟ್ಟಡ ಹೆಚ್ಚಾದಂತೆ ಅದರ ಸಮೀಪದ ನಿವೇಶನಗಳ ದರವೂ ಹೆಚ್ಚಳವಾಗುತ್ತದೆ ಎಂದರು.

ಎಲ್ಲರಿಗೂ ನಿವೇಶನ, ಮನೆ ನೀಡಲು ಸರಕಾರದಿಂದ ಸಾಧ್ಯವಿಲ್ಲ. ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಮನೆಗಳನ್ನು ಕಳೆದ 10 ವರ್ಷಗಳಿಂದ ನೀಡುತ್ತಿರುವ ಫಾರ್ಚೂನ್ ಪ್ರಮೋಟರರ್ಸ್ ಅವರದ್ದೂ ಸಾಮಾಜಿಕ ಕಾರ್ಯ ಎಂದು ಸಂಸ್ಥೆಯನ್ನು ಅಭಿನಂಧಿಸಿ, ಶುಭಹಾರೈಸಿದರು.


ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಫಾರ್ಚೂನ್ ಪ್ರಮೋಟರ್ಸ್ ನಾಲ್ಕು ಬಲಿಷ್ಠ ಕಂಬಗಳಿಂದ ನಿಂತಿದೆ. ಸರಕಾರಿ ಮಟ್ಟದ ಎಲ್ಲಾ ದಾಖಲೆ ಪತ್ರಗಳನ್ನು ಪಡೆದುಕೊಂಡೆ ಅವರು ಸಮುಚ್ಚಯಗಳನ್ನು ನಿರ್ಮಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಸಂಸ್ಥೆ 10ವರ್ಷಗಳ ಅನುಭವಗಳನ್ನು ಹೊಂದಿದೆ. ಗ್ರಾಹಕರು ಧೈರ್ಯದಿಂದ ಮನೆ, ಅಂಗಡಿಗಳನ್ನು ಖರೀದಿಸಬಹುದು ಎಂದರು.

ಮಂಗಳೂರು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೋ ಶುಭಹಾರೈಸಿದರು.


ಸಮಾರಂಭದಲ್ಲಿ ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಾಹುಲ್ ಹಮೀದ್, ಫಾರ್ಚೂನ್ ಪ್ರಮೋಟರರ್ಸ್ ಪಾಲುದಾರರಾದ ಅಬುಲ್ ಅಲಾ ಪುತ್ತಿಗೆ, ರೋನಿ ಫೆರ್ನಾಂಡಿಸ್, ಡೆನಿಸ್ ಪೆರೇರಾ, ಮಹೇಂದ್ರ ವರ್ಮಾ, ಫಾರ್ಚೂನ್ ಗ್ಯಾಲಕ್ಸಿ ಯೋಜನೆಯ ಕೊ ಪ್ರಮೋಟರ್ ಹಸನ್ ಅಬ್ಬಾಸ್ ಮತ್ತಿತರರು ಉಪಸ್ಥಿತರಿದ್ದರು.

ಸಹಿಲ್ ಝಾಹಿರ್ ಕಾರ್ಯಕ್ರಮ ನಿರೂಪಿಸಿದರು.



































Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News