ಮಂಗಳೂರು: ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Update: 2024-05-06 18:28 GMT

ಮಂಗಳೂರು: ವಿದ್ಯಾರ್ಥಿಗಳ ಮುಂದಿನ ಉಜ್ವಲ ಭವಿಷ್ಯದ ನಿರ್ಮಾಣಕ್ಕಾಗಿ ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆ ವತಿಯಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಪಚ್ಚನಾಡಿ ಗ್ರಾಮದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಮಾತನಾಡುತ್ತಾ ನಾವು ಸಣ್ಣವರಿದ್ದಾಗ ಕಲಿಕಾ ಸಾಮಗ್ರಿಗಳು ಇಲ್ಲದೆ ಕಷ್ಟಪಟ್ಟಿದ್ದೇವೆ. ಅಂತಹ ಕಷ್ಟ ಬಡ ವಿದ್ಯಾರ್ಥಿಗಳು ಪಡಬಾರದೆಂದು ಹಾಗು ಸಮಾಜದ ಎಲ್ಲರಿಗೂ ಪ್ರೇರಣೆಯಾಗುವಂತೆ ಮಂಗಳೂರಿನ ಎಲ್ಲಾ ಕಡೆ ಪ್ರತಿವರ್ಷದಂತೆ ಪುಸ್ತಕ ವಿತಾರಣೆ ಕಾರ್ಯಕ್ರಮ ಮಾಡುವುದಾಗಿ ಭರವಸೆ ನೀಡಿದರು.

ಪುಸ್ತಕ ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಕಲಿತು ಆರ್ಥಿಕವಾಗಿ ಬೆಳೆದರೆ ನೀವು ಕೂಡ ಈ ರೀತಿಯ ಕಾರ್ಯಕ್ರಮ ಮಾಡುವುದರ ಮೂಲಕ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಎಂದು ಹೇಳಿದರು.

ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್, ಗೌರವಾಧ್ಯಕ್ಷರಾದ ವಸಂತ್ ಜೆ ಪೂಜಾರಿ, ಉಪಾಧ್ಯಕ್ಷರಾದ ಅಕ್ಷಯ್ ಬಂಜನ್ ಹಾಗೂ ಕಮಲಾಕ್ಷ ಬಜಾಲ್, ಪ್ರಧಾನ ಕಾರ್ಯದರ್ಶಿ ನಟರಾಜ್ ಪಚ್ಚನಾಡಿ, ಜೊತೆ ಕಾರ್ಯದರ್ಶಿಗಳಾದ ಶರತ್ ಕುಂದರ್ ಪದವಿನಂಗಡಿ, ಪ್ರಸಾದ್ ಕುಂಪಲ, ಖಜಾಂಚಿ ಅರುಣ್ ಡಿಸೋಜ ಹಾಗೂ ಪ್ರಮುಖ ಸದಸ್ಯರಾದ ರಾಕೇಶ್ ಶೆಟ್ಟಿ, PFC ತಂಡದ ಪ್ರಮುಖರಾದ ಐವನ್ ಆಲ್ವರಿಸ್, ಕೀರ್ತಿ ಪ್ರಸಾದ್, ರಘು, ರಾಕೇಶ್ ಶೆಟ್ಟಿ, ರೂಪೇಶ್ ಶೆಟ್ಟಿ ಹಾಗು ಇತರರು ಉಪಸ್ಥಿತರಿದ್ದರು.

ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆ ವತಿಯಿಂದ ಇನ್ನಷ್ಟು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೊಸ ಯೋಜನೆಗಳನ್ನು ಹಮ್ಮಿ ಕೊಂಡಲ್ಲಿದ್ದೇವೆ. ನಮ್ಮ ಜೊತೆ ಸಹಕಾರ ನೀಡಿದ ನಮ್ಮ ತಂಡದ ಎಲ್ಲ ಸದಸ್ಯರಿಗೂ, ದಾನಿಗಳಿಗೂ ಧನ್ಯವಾದಗಳು. ನಿಮ್ಮೆಲ್ಲರ ಸಂಪೂರ್ಣ ಸಹಕಾರ ನಮ್ಮ ತಂಡದ ಮೇಲೆ ಸದಾ ಹೀಗೆ ಇರಲಿ ಎಂದು ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ ಎಂದು ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆ ತಿಳಿಸಿದೆ.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News