ಪಿಲ್ಯ | ಅಲ್ ಬದ್ರಿಯಾ ಮದರಸದಲ್ಲಿ "ನೋ ಫೈರ್, ನ್ಯೂ ಫ್ಲೇವರ್ಸ್" ವಿಶೇಷ ಕಾರ್ಯಕ್ರಮ
ಪಿಲ್ಯ: ಅಲ್ ಬದ್ರಿಯಾ ಮದರಸ ಪಿಲ್ಯದಲ್ಲಿ “ No Fire, New Flavours” ಎಂಬ ಮಕ್ಕಳ ವಿಶೇಷ ಕಾರ್ಯಕ್ರಮವು ಜಾಮಿಯಾ ಮಸೀದಿ ಪಿಲ್ಯ ಇಮಾಮ್ ಮುಹಮ್ಮದ್ ಇಶ್ಫಾಕ್ ಮುಈನಿ ಅಲ್ ಅದನಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.
ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿದ ತಂಡಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡುವ ಈ ಕಾರ್ಯಕ್ರಮಕ್ಕೆ ಹಲವಾರು ಗಣ್ಯ ವ್ಯಕ್ತಿಗಳು ಸಹರಿಸಿದರು.
ಜಮಾಅತ್ ಸಮಿತಿಯ ಅಧ್ಯಕ್ಷ ಅಝೀಝ್ ಬದ್ರಿಯಾ ನಗರ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ, ಉಪಾಧ್ಯಕ್ಷ ಅಬ್ಬಾಸ್ ಅಲದಂಗಡಿ ಹಾಗೂ ಸ್ಥಳೀಯ ಹಿರಿಯರು, ಯುವಕರು ಸೇರಿ ಕಾರ್ಯಕ್ರಮಕ್ಕೆ ಸಹಕಾರ ನೀಡಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಿದರು.