ರೋಹನ್ ಮೊಂತೆರೊಗೆ ಮಾತೃ ವಿಯೋಗ
ಮಂಗಳೂರು, ಆ.19: ರೋಹನ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೆರೊ ಅವರ ತಾಯಿ ಮೂಡುಜೆಪ್ಪುಕೆಲರಾಯಿ ನಿವಾಸಿ ಹಾಗೂ ದಿ. ಗಿಲ್ಬರ್ಟ್ ಮೊಂತೆರೊ ಅವರ ಪತ್ನಿ ಪ್ರೆಸಿಲ್ಲಾ ಮೊಂತೆರೊ (81) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
ಮೃತರು ರೋಹನ್ ಮೊಂತೆರೊ ಸೇರಿದಂತೆ ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಪ್ರಗತಿಪರ ಕೃಷಿಕರು ಮತ್ತು ಪರೋಪಕಾರಿ ಸ್ವಭಾವದವರಾಗಿದ್ದ ಅವರು ನೆರೆಹೊರೆಯವರು ಹಾಗೂ ಪರಿಚಿತರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು.
ಅಂತ್ಯಕ್ರಿಯೆ: ಪ್ರೆಸಿಲ್ಲಾ ಮೊಂತೆರೊ ಅವರ ಪಾರ್ಥಿವ ಶರೀರವನ್ನು ಆ.21ರ ಬೆಳಗ್ಗೆ 10:30ಕ್ಕೆ ಕೆಲರಾಯಿಯ ಸಂತ ಅನ್ನಾ ಚರ್ಚ್‌ನಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುವುದು. ಬಳಿಕ ಬೆಳಗ್ಗೆ 11 ಗಂಟೆಗೆ ಚರ್ಚ್‌ನಲ್ಲಿ ಪವಿತ್ರ ಬಲಿಪೂಜೆ ನೆರವೇರಲಿದೆ, ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ.
*ಸಂತಾಪ: ರೋಹನ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೆರೊ ಅವರ ತಾಯಿ ಪ್ರೆಸಿಲ್ಲಾ ಮೊಂತೆರೊ ನಿಧನಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಕೌನ್ಸಿಲ್‌ನ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್, ಯೆನೆಪೋಯ ವಿವಿ ಕುಲಾಧಿಪತಿ ಡಾ. ವೈ. ಅಬ್ದುಲ್ಲ ಕುಂಞಿ ಸಂತಾಪ ವ್ಯಕ್ತಪಡಿಸಿದ್ದಾರೆ.