×
Ad

ಬಿಎಸ್‌ವೈ ಸ್ವಪಕ್ಷದವರ ಬಗ್ಗೆ ಎಚ್ಚರಿಕೆಯಿಂದ ಇರಲಿ : ಸತೀಶ್ ಜಾರಕಿಹೊಳಿ

Update: 2026-05-08 23:16 IST

ದಾವಣಗೆರೆ, ಮೇ 8: ಚಿತ್ರದುರ್ಗದಲ್ಲಿ ಅಭಿನಂದನೋತ್ಸವ ಆಚರಿಸುತ್ತಿರುವ ಯಡಿಯೂರಪ್ಪನವರಿಗೆ ಒಳ್ಳೆಯದಾಗಲಿ. ಬಿಎಸ್‌ವೈ ಹೋರಾಟಗಾರರು. ಬಹಳ ಕೆಳ ಹಂತದಿಂದ ಇಲ್ಲಿವರೆಗೆ ಬಂದಿದ್ದಾರೆ. ಅವರು ತಮ್ಮ ಪಕ್ಷದಲ್ಲಿರುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡುವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದರು. ಆಗ ಕೆಳಗೆ ಇಳಿಸಿದ್ದವರೇ ಉತ್ಸವ ಮಾಡಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಹುಷಾರಾಗಿ ಹೆಜ್ಜೆ ಇಟ್ಟರೆ ಯಶಸ್ವಿಯಾಗುತ್ತಾರೆ. ಇನ್ನಾದರೂ ವಿಜಯೇಂದ್ರ ಸ್ವಲ್ಪಜಾಗ್ರತೆ ವಹಿಸಲಿ ಎಂದು ಅವರು ವಿಜಯೇಂದ್ರಗೆ ಕಿವಿಮಾತು ಹೇಳಿದರು.

ಈ ವೇಳೆ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ, ಶ್ಯಾಗಲೆ ಕೆ.ಆರ್.ಮಂಜುನಾಥ, ಹಿರಿಯ ವಕೀಲ ಎನ್.ಎಂ. ಆಂಜನೇಯ ಗುರೂಜಿ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News