×
Ad

ಪಿ.ಪದ್ಮನಾಭ ರಾವ್

Update: 2026-05-17 14:05 IST

ಉಡುಪಿ, ಮೇ 17: ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಹಿರಿಯ ವ್ಯವಸ್ಥಾಪಕ ಪಿ.ಪದ್ಮನಾಭ ರಾವ್(83) ಮೇ 15ರಂದು ನಿಧನರಾದರು.

ಒಡಿಶಾದ ಅಡ್ಡಗದ್ದೆ ಕೇಂದ್ರ ಕಚೇರಿ, ಪಯ್ಯನೂರು, ಕಾರ್ಕಳ, ಶೃಂಗೇರಿ, ಉಡುಪಿಯ ಕೆಥೋಲಿಕ್ ಸೆಂಟರ್ ಸೇರಿದಂತೆ ಸಿಂಡಿಕೇಟ್ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ 35 ವರ್ಷಗಳ ಕಾಲ ಸೇವೆಸಲ್ಲಿಸಿದ್ದರು.

ಇವರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಕಲಾಪ್ರೇಮಿ ಯಾಗಿದ್ದ ಇವರು ಯಕ್ಷಗಾನ ಕಲಾರಂಗದ ಪೋಷಕ ಸದಸ್ಯರಾಗಿದ್ದರು. ಇವರ ನಿಧನಕ್ಕೆ ಕಲಾರಂಗ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆರ್ಕಾ ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಹೇಮಾ

ಸೂರಜ್