ಧಾರವಾಡ: ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಇಂದು ಬೆಳಗ್ಗೆ 8ಕ್ಕೆ ಆರಂಭವಾಗಿದೆ.

ಚುನಾವಣಾ ವೀಕ್ಷಕ ಮನೋಜ ಜೈನ್ ಮತ್ತು ಚುನಾವಣಾಧಿಕಾರಿ ಕೆ.ಎಂ.ಜಾನಕಿ ಹಾಗೂ ಅಭ್ಯರ್ಥಿ ಮತ್ತು ಅವರ ಚುನಾವಣಾ ಏಜೆಂಟ್ ರ ಸಮಕ್ಷಮ ಸ್ಟ್ರಾಂಗ್ ರೂಂ ಓಪನ್ ಮಾಡಿ ಮತಪೆಟ್ಟಿಗೆಗಳನ್ನು ಒಡೆದು ಬಂಡ್ಲಿಂಗ್ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ.

14 ಮತಪೆಟ್ಟಿಗೆಗಳನ್ನು ಸಂಪೂರ್ಣ ಓಪನ್ ಮಾಡಿ ಬಂಡ್ಲಿಂಗ್ ಮಾಡಿದ ನಂತರ ಬ್ಯಾರೆಲ್ನಲ್ಲಿ ರ್ಯಾಂಡಮೈಜೇಷನ್ ಬಳಿಕ ಪ್ರಥಮ ಪ್ರಾಶಸ್ತ್ಯ ಮತ ಎಣಿಕೆ ಶುರುವಾಗಲಿದೆ.

ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಒಟ್ಟು 97,400 ಮತದಾರರಿದ್ದು, ಅವರಲ್ಲಿ 57,345 ಪುರುಷರು ಹಾಗೂ 40,055 ಮಹಿಳಾ ಮತದಾರರಿದ್ದಾರೆ. ಅಕ್ಟೋಬರ್ 23 ರಂದು ನಡೆದ ಶಾಂತಿಯುತ ಚುನಾವಣೆಯಲ್ಲಿ ಒಟ್ಟು 73,692 ಮತಗಳು ಚಲಾವಣೆಯಾಗಿದ್ದು, ಶೇ.75.66ರಷ್ಟು ಮತದಾನವಾಗಿದೆ.

ಕಾಂಗ್ರೆಸ್ನಿಂದ ಮೋಹನ ಲಿಂಬಿಕಾಯಿ, ಬಿಜೆಪಿಯಿಂದ ಎಸ್.ವಿ. ಸಂಕನೂರು, ಕರ್ನಾಟಕ ರಾಷ್ಚ್ರಸಮಿತಿಯಿಂದ ನಿಶಾಂತ ಶಂಕರ ಬಂಕಾಪೂರ, ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾದಿಂದ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ, ಜನತಾ ಚಳವಳಿ ಭಾರತ ಪಕ್ಷದಿಂದ ತಳವಾರ ಶಿವಕುಮಾರ ಹಾಗೂ ಪಕ್ಷೇತರರು ಸೇರಿದಂತೆ ಚುನಾವಣಾ ಕಣದಲ್ಲಿರುವ 14 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor