Hassan | ಡ್ರಗ್ಸ್ ಅಮಲಿನಲ್ಲಿ ಯುವಕನ ಬರ್ಬರ ಹತ್ಯೆ: ಮೃತದೇಹದ ಎದುರು ನಿಂತು ವಿಡಿಯೋ ಮಾಡಿದ ಆರೋಪಿಗಳು
Update: 2025-12-09 14:43 IST
ವೈರಲ್ ವೀಡಿಯೊದಲ್ಲಿರುವ ಕೊಲೆ ಆರೋಪಿ
ಹಾಸನ: ಡ್ರಗ್ಸ್ ಅಮಲಿನಲ್ಲಿ ಯುವಕನನ್ನು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ದುಷ್ಕರ್ಮಿಗಳು, ಹತ್ಯೆಯ ಬಳಿಕ ಮೃತದೇಹದ ಎದುರು ನಿಂತು ವಿಡಿಯೋ ಚಿತ್ರೀಕರಿಸಿರುವ ಅಮಾನವೀಯ ಕೃತ್ಯ ಹಾಸಗ ನಗರದ ಹೊರವಲಯದಲ್ಲಿ ನಡೆದಿದೆ.
ಹೊಳೆನರಸೀಪುರ ರಸ್ತೆಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ಕೊಲೆ ನಡೆದಿದೆ.
ಕೊಲೆಯಾದವನ ಗುರುತು ಪತ್ತೆಯಾಗಿಲ್ಲ.
ವೈರಲ್ ವೀಡಿಯೊದಲ್ಲಿ ನಾವು ಕೊಲೆ ಮಾಡಿದ್ದೇವೆ ಎಂದು ಯುವಕನೋರ್ವ ಮೃತದೇಹವನ್ನು ತೋರಿಸುತ್ತಿರುವುದು ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳನ್ನು ಪತ್ತೆಹಚ್ಚಲು ಹಾಗೂ ಹತ್ಯೆಯ ಹಿಂದಿರುವ ಕಾರಣ ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.