×
Ad

ಶಿಗ್ಗಾಂವಿ ಉಪ ಚುನಾವಣೆ | ಹಕ್ಕುಪತ್ರ ಸಿಗದ ಆಕ್ರೋಶ: ಮನೆಗಳ ಮುಂದೆ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಕೆ!

Update: 2024-11-13 15:16 IST

ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಸವಣೂರಿನ ದಂಡಿನಪೇಟೆ ಎಂಬಲ್ಲಿ ಮತದಾನ ಬಹಿಷ್ಕಾರದ ಕೂಗು ಕೇಳಿಬಂದಿದೆ. ಇಲ್ಲಿನ ಸುಮಾರು ಏಳು ಮನೆಗಳ ಮುಂದೆ ಮತದಾನದ ಬಹಿಷ್ಕಾರ ಬೋರ್ಡ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಚುನಾವಣಾ ಬಹಿಷ್ಕಾರ ಪ್ರದೇಶ' ಎಂದು ದೊಡ್ಡದಾಗಿ ಬರೆದಿರುವ ಬ್ಯಾನರ್ ನಲ್ಲಿ 'ಉಳುವವನೇ ಭೂಮಿ ಒಡೆಯ ದಲಿತನ ಜಮೀನನ್ನು ಬೇರೊಬ್ಬ ವ್ಯಕ್ತಿಗೆ ಮಾಡಿಕೊಂಡ ಕಂದಾಯ ಇಲಾಖೆ. ಮೂಲ ನಿವಾಸಿಗಳಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಉಪ ವಿಭಾಗಾಧಿಕಾರಿಗಳ ಸುಳ್ಳು ಭರವಸೆ' ಎಂದು ಬರೆಯುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ ಇಲ್ಲಿನ ಗ್ರಾಮಸ್ಥರು.

ದಂಡಿನಪೇಟೆಯ ಏಳು ಮನೆಗಳ ಸುಮಾರು 60ಕ್ಕೂ ಮತದಾರರು ಮತದಾನದಿಂದ ದೂರ ಉಳಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News