×
Ad

ಹಾವೇರಿ: ರೋಡ್‌ ರೋಲರ್‌ ಹರಿದು ಇಬ್ಬರು ಕಾರ್ಮಿಕರು ಸಾವು

Update: 2024-09-21 23:19 IST

ಬ್ಯಾಡಗಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದುರಸ್ತಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ರೋಡ್‌ ರೋಲರ್ ಹರಿದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಮೋಟೆಬೆನ್ನೂರು ಬಳಿ ನಡೆದಿದೆ.

ಅಳಲಗೇರಿ ಗ್ರಾಮದ ಸಿದ್ದು ಕಿಳ್ಳಿಕ್ಯಾತರ (24) ಮತ್ತು ಪ್ರೀತಮ ಕಿಳ್ಳಿಕ್ಯಾತರ (24) ಮೃತಪಟ್ಟವರು. ಇವರು ಊಟ ಮಾಡಿ ರಸ್ತೆ ಪಕ್ಕ ಮಲಗಿದ್ದ ಸಂದರ್ಭ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದ್ದು, ಸಂಬಂಧಪಟ್ಟ ಗುತ್ತಿಗೆದಾರರು ಸ್ಥಳಕ್ಕೆ ಬರುವವರೆಗೂ ಮೃತದೇಹದ ಸ್ಥಳದಿಂದ ಎತ್ತುವುದಿಲ್ಲ ಹಾಗೂ ಸ್ಥಳದಲ್ಲಿಯೇ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಅವರು ಧರಣಿ ನಡೆಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News