ಕೋಲ್ ಇಂಡಿಯಾ ನೇಮಕಾತಿಗೆ ಅರ್ಜಿ ಆಹ್ವಾನ
Photo Credit : Coal India Limited
660 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಕೇಂದ್ರ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ಬರುವ ಅತಿದೊಡ್ಡ ಸಂಸ್ಥೆಯಾದ ಕೋಲ್ ಇಂಡಿಯಾ ಲಿಮಿಟೆಡ್ 2026ನೇ ಸಾಲಿನ ನೇಮಕಾತಿ ಅಭಿಯಾನದಡಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಬರೋಬ್ಬರಿ 660 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು: https://www.coalindia.in/career-cil/
📌 ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ: 2026 ಮೇ 12
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 2026 ಜೂನ್ 11
📌 ಹುದ್ದೆಯ ವಿವರ
ನೇಮಕಾತಿ ಸಂಸ್ಥೆ: ಕೋಲ್ ಇಂಡಿಯಾ ಲಿಮಿಟೆಡ್
ವೇತನ ಶ್ರೇಣಿ: ತಿಂಗಳಿಗೆ 60,000 ರೂ.ನಿಂದ 1,80,000 ರೂ.
ಹುದ್ದೆಗಳ ಸಂಖ್ಯೆ: 660 ಹುದ್ದೆಗಳು
ಉದ್ಯೋಗ ಸ್ಥಳ: ಭಾರತದಾದ್ಯಂತ
📌 ಹುದ್ದೆಗಳ ವಿತರಣೆ
ಮ್ಯಾನೇಜ್ಮೆಂಟ್ ಟ್ರೈನಿ
ಸಿವಿಲ್- 178
ಎಲೆಕ್ಟ್ರಿಕಲ್- 221
ಮೆಕ್ಯಾನಿಕಲ್- 145
ಸಿಸ್ಟಂ- 43
ಇ&ಟಿ- 38
ಭೂ ವಿಜ್ಞಾನ- 15
ಇಂಡಸ್ಟ್ರಿಯಲ್ ಎಂಜಿನಿಯರಿಂಗ್- 11
ರಾಜಭಾಷಾ (ಹಿಂದಿ)- 05
ಕಂಪನಿ ಸೆಕ್ರೆಟರಿ- 04
📌 ಶೈಕ್ಷಣಿಕ ಅರ್ಹತೆ
ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ 60ರಷ್ಟು ಅಂಕಗಳೊಂದಿಗೆ ಬಿಇ/ಬಿಟೆಕ್, ಬಿಎಸ್ಸಿ (ಎಂಜಿನಿಯರಿಂಗ್), ಎಂಸಿಎ, ಎಂ ಎಸ್ಸಿ, ಎಂ ಟೆಕ್, ಎಂಎ (ಹಿಂದಿ) ಅಥವಾ ಕಂಪನಿ ಸೆಕ್ರೆಟರಿ ಕೋರ್ಸ್ ಅನ್ನು ನಿಯಮಿತವಾಗಿ ಪೂರ್ಣಗೊಳಿಸಿರಬೇಕು. (ಎಸ್ಸಿ/ಎಸ್ಟಿ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಶೇ 55ರಷ್ಟು ಅಂಕಗಳಿದ್ದರೂ ಅವಕಾಶವಿದೆ)
📌 ವಯೋಮಿತಿ
ಸಾಮಾನ್ಯ ಹಾಗೂ ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷಗಳು.
ವಯೋಮಿತಿ ಸಡಿಲಿಕೆ: ಒಬಿಸಿ (ಎನ್ಸಿಎಲ್) ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ. ಕೋಲ್ ಇಂಡಿಯಾ ಉದ್ಯೋಗಿಗಳಿಗೆ ಯಾವುದೇ ವಯೋಮಿತಿ ಇರುವುದಿಲ್ಲ.
📌 ಅರ್ಜಿ ಶುಲ್ಕ
ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 1180 ರೂ, (1000 ರೂ. ಅರ್ಜಿ ಶುಲ್ಕ ಮತ್ತು 180 ರೂ. ಜಿಎಸ್ಟಿ)
ಎಸ್ಸಿ, ಎಸ್ಟಿ, ವಿಕಲಚೇತನ ಮತ್ತು ಕೋಲ್ ಇಂಡಿಯಾ ಉದ್ಯೋಗಿಗಳಿಗೆ: ಅರ್ಜಿ ಶುಲ್ಕವಿಲ್ಲ
ಪಾವತಿ ವಿಧಾನ: ಆನ್ಲೈನ್