ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?
ಸಾಂದರ್ಭಿಕ ಚಿತ್ರ
ಅರ್ಹತೆ ಪರಿಶೀಲನೆ ಪೂರ್ಣಗೊಂಡ ನಂತರ ಅರ್ಹ ಅಭ್ಯರ್ಥಿಗಳು 27 ಅಕ್ಟೋಬರ್ 2026ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗಬೇಕು.
ಕಲಬುರಗಿಯ ನೌಕರರ ರಾಜ್ಯ ವಿಮಾ ನಿಗಮದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ESIC) ವತಿಯಿಂದ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರಗಳನ್ನು ಈ ಲಿಂಕ್ನಲ್ಲಿ ಪಡೆಯಬಹುದು: https://esic.gov.in/recruitments
📌 ಪ್ರಮುಖ ವಿವರಗಳು
- ಸಂಸ್ಥೆ: ನೌಕರರ ರಾಜ್ಯ ವಿಮಾ ನಿಗಮ (ESIC) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕಲಬುರಗಿ
- ಒಟ್ಟು ಹುದ್ದೆಗಳು: 34
- ಹುದ್ದೆಗಳ ಹೆಸರು: ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು
- ಸಂಬಳ: ತಿಂಗಳಿಗೆ ರೂ. 1,42,170ರಿಂದ ರೂ. 2,48,850
📌 ಹುದ್ದೆಗಳ ವಿವರಗಳು
- ಒಟ್ಟು ಹುದ್ದೆಗಳು: 32 (ವಿವಿಧ ವಿಭಾಗಗಳಲ್ಲಿ — ಪ್ಯಾಥಾಲಜಿ, ಎದೆರೋಗ ವಿಭಾಗ, ಆರ್ಥೋಪೆಡಿಕ್ಸ್, ರೇಡಿಯಾಲಜಿ, ಅನಾಟಮಿ, ಫಿಸಿಯಾಲಜಿ, ಫಾರ್ಮಕಾಲಜಿ, ಫೊರೆನ್ಸಿಕ್ ಮೆಡಿಸಿನ್, ಐಸಿಯು (ICU), ಎನ್ಐಸಿಯು (NICU) ಮತ್ತು ಪಿಐಸಿಯು (PICU)).
- ಅರ್ಹತೆ: ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ (MD/MS/DNB); ವಯಸ್ಸು 44 ವರ್ಷಗಳಿಗಿಂತ ಕಡಿಮೆ ಇರಬೇಕು.
- ಮೀಸಲಾತಿ: ಭಾರತ ಸರಕಾರದ ನಿಯಮಗಳ ಪ್ರಕಾರ SC, ST, OBC, UR ಮತ್ತು EWS ವರ್ಗಗಳಿಗೆ ಅನ್ವಯಿಸುತ್ತದೆ.
📌 ಅರ್ಜಿ ಶುಲ್ಕದ ವಿವರಗಳು
- ಸಾಮಾನ್ಯ, OBC ಮತ್ತು ಇತರೆ ಅಭ್ಯರ್ಥಿಗಳಿಗೆ: ಡಿಮ್ಯಾಂಡ್ ಡ್ರಾಫ್ಟ್ (Demand Draft – DD) ಮೂಲಕ ರೂ. 300 ಅರ್ಜಿ ಶುಲ್ಕ ಪಾವತಿಸಬೇಕು.
- SC/ST/PWD/ಮಹಿಳಾ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕದಿಂದ ವಿನಾಯಿತಿ (ಉಚಿತ).
📌 ಅರ್ಜಿ ಮತ್ತು ದಾಖಲೆಗಳು
- ನೋಂದಣಿ: 26 ಅಕ್ಟೋಬರ್ 2026ರಂದು ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ.
- ಅಭ್ಯರ್ಥಿಗಳು ಮೂಲ ದಾಖಲೆಗಳು ಹಾಗೂ ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ತರಬೇಕು:
- SSC/10ನೇ ತರಗತಿ ಪ್ರಮಾಣಪತ್ರ (ವಯಸ್ಸಿನ ಪುರಾವೆ)
- MBBS ಮತ್ತು PG/DNB ಪ್ರಮಾಣಪತ್ರಗಳು
- ವೈದ್ಯಕೀಯ ಮಂಡಳಿಯ ನೋಂದಣಿ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
- ಗುರುತಿನ ಪುರಾವೆ (ಆಧಾರ್, PAN)
- ಎರಡು ಪಾಸ್ಪೋರ್ಟ್ ಗಾತ್ರದ ಫೋಟೋಗಳು
📌 ಆಯ್ಕೆ ಪ್ರಕ್ರಿಯೆ
- ಅರ್ಜಿಗಳ ಪರಿಶೀಲನೆಯ ನಂತರ ಆಯ್ಕೆ ಮಂಡಳಿಯ ಮುಂದೆ ಸಂದರ್ಶನ ನಡೆಯಲಿದೆ.
- ಅರ್ಜಿದಾರರ ಸಂಖ್ಯೆ ಹೆಚ್ಚಿದ್ದರೆ ಸ್ಕ್ರೀನಿಂಗ್ ಪರೀಕ್ಷೆಯನ್ನೂ ನಡೆಸಬಹುದು.
- ಅರ್ಹತೆಗೆ ಶೇ 50ರಷ್ಟು ಅಂಕಗಳು ಅಗತ್ಯವಿದೆ.
- ಸಂದರ್ಶನದಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ.
- ಫಲಿತಾಂಶಗಳನ್ನು https://www.esic.gov.in/recruitments ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
📌 ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ESIC ಅಧಿಕೃತ ವೆಬ್ಸೈಟ್ esic.gov.in ಗೆ ಭೇಟಿ ನೀಡಿ.
- ESIC ಕಲಬುರಗಿ ನೇಮಕಾತಿ ಅಧಿಸೂಚನೆಯನ್ನು ಹುಡುಕಿ.
- ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ನಮೂನೆ, ಹುದ್ದೆಯ ಅರ್ಹತೆ, ಶುಲ್ಕ ಮತ್ತು ಸಂದರ್ಶನದ ಸೂಚನೆಗಳನ್ನು ಪರಿಶೀಲಿಸಿ.
- ಅಗತ್ಯವಿದ್ದರೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಕೇಳಿರುವ ದಾಖಲೆಗಳೊಂದಿಗೆ ಸಿದ್ಧಪಡಿಸಿಕೊಳ್ಳಿ.
- 26 ಅಕ್ಟೋಬರ್ 2026ರಂದು ಬೆಳಿಗ್ಗೆ 9ರಿಂದ 11 ಗಂಟೆಯೊಳಗೆ ದಾಖಲೆ ಪರಿಶೀಲನೆಗಾಗಿ ನೋಂದಾಯಿಸಿಕೊಳ್ಳಿ.
- ಅರ್ಹತೆ ಪರಿಶೀಲನೆ ಪೂರ್ಣಗೊಂಡ ನಂತರ ಅರ್ಹ ಅಭ್ಯರ್ಥಿಗಳು 27 ಅಕ್ಟೋಬರ್ 2026ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗಬೇಕು.
📌 ಸಂದರ್ಶನ ನಡೆಯುವ ಸ್ಥಳದ ವಿವರಗಳು
- ಹುದ್ದೆ: ಸೀನಿಯರ್ ರೆಸಿಡೆಂಟ್ (ಒಪ್ಪಂದದ ಆಧಾರದ ಮೇಲೆ, ಒಂದು ವರ್ಷ)
- ಸ್ಥಳ: ಡೀನ್ ಕಚೇರಿ, ESIC ವೈದ್ಯಕೀಯ ಕಾಲೇಜು, ಸೇಡಂ ರಸ್ತೆ, ಕಲಬುರಗಿ, ಕರ್ನಾಟಕ – 585106.
- ದಾಖಲೆ ಪರಿಶೀಲನೆ ಮತ್ತು ನೋಂದಣಿ: 26 ಅಕ್ಟೋಬರ್ 2026ರಂದು ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ.
- ವೈಯಕ್ತಿಕ ಸಂದರ್ಶನ: 27 ಅಕ್ಟೋಬರ್ 2026ರಂದು ಬೆಳಿಗ್ಗೆ 9 ಗಂಟೆಯಿಂದ.