×
Ad

ಕ್ರೈಮಿಯಾದಲ್ಲಿ ರಷ್ಯಾದ ಮಿಲಿಟರಿ ವಿಮಾನ ಪತನ: 29 ಮಂದಿ ಮೃತ್ಯು

Update: 2026-04-01 10:18 IST

Photo| X/@RT_com/indiatoday

ಕ್ರೈಮಿಯಾ, ಏ.1: ರಷ್ಯಾದ ಮಿಲಿಟರಿ ಸಾರಿಗೆ ವಿಮಾನ AN-26 ಬುಧವಾರ ಮುಂಜಾನೆ ಕ್ರೈಮಿಯಾದಲ್ಲಿ ಬಂಡೆಗೆ ಅಪ್ಪಳಿಸಿ ಪತನಗೊಂಡ ಪರಿಣಾಮ ಅದರಲ್ಲಿದ್ದ ಎಲ್ಲಾ 29 ಮಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ರಾಡರ್ ನಿಂದ ಸಂಪರ್ಕ ಕಳೆದುಕೊಂಡಿದ್ದ ಈ ವಿಮಾನವು 2014ರಲ್ಲಿ ರಷ್ಯಾ ಉಕ್ರೇನ್‌ ನಿಂದ ಸ್ವಾಧೀನಪಡಿಸಿಕೊಂಡಿರುವ ಕಪ್ಪು ಸಮುದ್ರದ ಪರ್ಯಾಯ ದ್ವೀಪ ಪ್ರದೇಶದಲ್ಲಿ ಪತನಗೊಂಡಿದೆ. ಈ ದುರ್ಘಟನೆಯಲ್ಲಿ 23 ಪ್ರಯಾಣಿಕರು ಮತ್ತು ಆರು ಮಂದಿ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ದೃಢಪಡಿಸಿದೆ. ಬದುಕುಳಿದವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

AN-26 ವಿಮಾನವು ಬಂಡೆಗೆ ಅಪ್ಪಳಿಸಿದೆ ಎಂದು ಟಾಸ್ ಸುದ್ದಿ ಸಂಸ್ಥೆ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ತಿಳಿಸಿದೆ. ಅಪಘಾತ ಸಂಭವಿಸಿದ ಸ್ಥಳವನ್ನು ಪತ್ತೆಹಚ್ಚಲಾಗಿದ್ದು, ಆದರೆ ನಿಖರ ಕಾರಣಗಳ ಬಗ್ಗೆ ಅಧಿಕಾರಿಗಳು ಇನ್ನೂ ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಪ್ರಾಥಮಿಕ ವರದಿಗಳ ಪ್ರಕಾರ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು RIA ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಈ ಕುರಿತು ಅಧಿಕೃತ ಸ್ಪಷ್ಟನೆ ಇನ್ನೂ ಲಭ್ಯವಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News