ಓಕ್ಲಹೊಮಾದಲ್ಲಿ ಚಂಡಮಾರುತ ; ಕನಿಷ್ಠ 4 ಮಂದಿ ಮೃತ್ಯು

Update: 2024-04-29 16:06 GMT

ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್ : ಅಮೆರಿಕದ ಓಕ್ಲಹೊಮಾ ನಗರದಲ್ಲಿ ಚಂಡಮಾರುತದ ಅಬ್ಬರಕ್ಕೆ ಮಗು ಸೇರಿದಂತೆ ಕನಿಷ್ಠ 4 ಮಂದಿ ಮೃತಪಟ್ಟಿದ್ದು 100ಕ್ಕೂ ಅಧಿಕ ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಸಲ್ಫುರ್ ನಗರದಲ್ಲಿ ವ್ಯಾಪಕ ನಾಶ-ನಷ್ಟ ಸಂಭವಿಸಿದ್ದು ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಸುಂಟರಗಾಳಿಯು ಕಾರುಗಳನ್ನು ಬುಡಮೇಲುಗೊಳಿಸಿದ್ದು ಹಲವು ಮನೆಗಳ ಛಾವಣಿ ಹಾರಿಹೋಗಿದೆ. ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಈ ಮಧ್ಯೆ, ಓಕ್ಲಹೊಮಾ ನಗರ, ತುಲ್ಸಾ, ದಲ್ಲಾಸ್, ಆಸ್ಟಿನ್, ಕನಾಸ್ ಸಿಟಿಗಳನ್ನು ಮತ್ತಷ್ಟು ತೀವ್ರ ಚಂಡಮಾರುತ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News