ಕಂಪ್ಯೂಟರ್ ವ್ಯವಸ್ಥೆಯಲ್ಲಿ ದೋಷ | ಬ್ರಿಟನ್ ವಿಮಾನ ನಿಲ್ದಾಣದಲ್ಲಿ ಗೊಂದಲ

Update: 2024-05-08 17:38 GMT

ಸಾಂದರ್ಭಿಕ ಚಿತ್ರ

ಲಂಡನ್: ಬ್ರಿಟನ್‍ನ ಗಡಿಭದ್ರತಾ ಪಡೆಯ ಕಂಪ್ಯೂಟರ್ ವ್ಯವಸ್ಥೆಯಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ವಿಮಾನ ನಿಲ್ದಾಣಗಳ ಸುಗಮ ಕಾರ್ಯನಿರ್ವಹಣೆಗೆ ತೊಡಕಾಗಿದ್ದು ಪ್ರಯಾಣಿಕರಿಗೆ ಅನಾನುಕೂಲವಾಗಿದೆ ಎಂದು ವರದಿಯಾಗಿದೆ.

ದೇಶದ ಪ್ರಮುಖ ಬಾರ್ಡರ್ ಕ್ರಾಸಿಂಗ್ ಭದ್ರತಾ ವ್ಯವಸ್ಥೆ(ಗಡಿ ನಿಯಂತ್ರಣಾ ಕಂಪ್ಯೂಟರ್ ವ್ಯವಸ್ಥೆ)ಯಲ್ಲಿ ದೋಷ ಕಂಡುಬಂದಿದೆ. ವಿಮಾನ ನಿಲ್ದಾಣಗಳ ಕಂಪ್ಯೂಟರ್ ವ್ಯವಸ್ಥೆ ಸ್ಥಗಿತಗೊಂಡ ಕಾರಣ ಪ್ರಯಾಣಿಕರ ಚೆಕ್-ಇನ್ ವ್ಯವಸ್ಥೆ ಇ-ಗೇಟ್‍ನ ಕಾರ್ಯನಿರ್ವಹಣೆ ಮೊಟಕುಗೊಂಡಿದೆ. ಭಯೋತ್ಪಾದನಾ ದಾಖಲೆಗಳು, ರಾಷ್ಟ್ರೀಯ ಪೊಲೀಸ್ ಕಂಪ್ಯೂಟರ್ ಮತ್ತು ಡೇಟಾಬೇಸ್‍ನೊಂದಿಗೆ ಪ್ರಯಾಣಿಕರ ಮಾಹಿತಿಯನ್ನು ಕ್ರಾಸ್-ರೆಫರೆನ್ಸ್ ಮಾಡಲು ವಿನ್ಯಾಸಗೊಳಿಸಲಾದ ದೇಶದ ಗಡಿದಾಟುವ ವ್ಯವಸ್ಥೆಯ ಕುಸಿತವು ತೀವ್ರ ಅಡಚಣೆಗೆ ಕಾರಣವಾಗಿದೆ. ಬಳಿಕ ಅನಿವಾರ್ಯವಾಗಿ ಹಸ್ತಚಾಲಿತ ಪರಿಶೀಲನೆ(ಮ್ಯಾನುವಲ್ ಚೆಕ್) ನಡೆಸಲಾಗಿದ್ದು ಪ್ರಯಾಣಿಕರು ಮಾರುದ್ದದ ಸರತಿ ಸಾಲಿನಲ್ಲಿ ಕಾಯಬೇಕಾಯಿತು. ಕೆಲ ಗಂಟೆಗಳಲ್ಲೇ ಸಮಸ್ಯೆಯನ್ನು ಸರಿಪಡಿಸಲಾಗಿದ್ದು ಕಂಪ್ಯೂಟರ್ ವ್ಯವಸ್ಥೆ ಸಕ್ರಿಯವಾಗಿದೆ. ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸುಗಮಗೊಂಡಿದೆ ಎಂದು ಬ್ರಿಟನ್‍ನ ವಾಯುಯಾನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News