×
Ad

ಗಾಝಾ | ಇಸ್ರೇಲ್ ದಾಳಿಯಲ್ಲಿ 3 ಮಕ್ಕಳ ಸಹಿತ 5 ಮಂದಿ ಮೃತ್ಯು

Update: 2024-07-15 21:30 IST

PC : aljazeera.com

ಗಾಝಾ ಪಟ್ಟಿ: ಗಾಝಾ ಪಟ್ಟಿಯ ಮೇಲೆ ನೆಲ, ಸಮುದ್ರ ಮತ್ತು ಆಗಸದಿಂದ ನಡೆಯುತ್ತಿರುವ ಇಸ್ರೇಲ್ ದಾಳಿಯಲ್ಲಿ ಹಲವಾರು ಜನವಸತಿ ಕಟ್ಟಡಗಳು ನಾಶಗೊಂಡಿದ್ದು ಮೂವರು ಮಕ್ಕಳ ಸಹಿತ ಕನಿಷ್ಟ 5 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಗಾಝಾ ಪಟ್ಟಿಯ ತಲ್ ಅಲ್-ಹವಾ, ಶೇಖ್ ಅಜ್ಲಿನ್ ಮತ್ತು ಅಲ್-ಸಬ್ರಾ ನಗರದ ಮೇಲೆ ಶೆಲ್‍ಗಳ ಸುರಿಮಳೆಯಾಗಿದೆ. ಕೇಂದ್ರ ಗಾಝಾದ ನುಸೀರತ್ ನಿರಾಶ್ರಿತರ ಶಿಬಿರದ ಹೊರವಲಯ ಮತ್ತು ಅಲ್-ಮುಘ್ರಕಾ ಪ್ರದೇಶದ ಮೇಲೆ ಇಸ್ರೇಲ್ ಸೇನೆ ಫಿರಂಗಿ ಮತ್ತು ಗುಂಡಿನ ದಾಳಿ ನಡೆಸಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ದಕ್ಷಿಣ ಗಾಝಾದಲ್ಲಿ ಖಾನ್‍ಯೂನಿಸ್ ನಗರದ ಪೂರ್ವ ಪ್ರಾಂತದ ಮೇಲೆ ಇಸ್ರೇಲ್‍ನ ಸಮರ ನೌಕೆಗಳು ದಾಳಿ ನಡೆಸಿವೆ. ರಫಾ ನಗರದ ಮೇಲೆ ಇಸ್ರೇಲ್ ಯುದ್ಧವಿಮಾನ ಹಾಗೂ ಹೆಲಿಕಾಪ್ಟರ್‍ಗಳಿಂದ ಬಾಂಬ್ ದಾಳಿ ನಡೆದಿದೆ. ಕರಾವಳಿ ಪ್ರಾಂತದಾದ್ಯಂತ ತನ್ನ ಕಾರ್ಯಾಚರಣೆ ಮುಂದುವರಿಯಲಿದೆ. ರಫಾ ಮತ್ತು ಕೇಂದ್ರ ಗಾಝಾದ ಮೇಲೆ ನಡೆದ ದಾಳಿಯಲ್ಲಿ ಹಮಾಸ್‍ನ ಹಲವು ಸದಸ್ಯರು ಸಾವನ್ನಪ್ಪಿದ್ದಾರೆ. ಗಾಝಾದ ಪ್ರಮುಖ ನೆಲೆಗಳನ್ನು ಗುರಿಯಾಗಿಸಿ ಸಮರ ನೌಕೆಗಳು ದಾಳಿ ಮುಂದುವರಿಸಿವೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಈ ಮಧ್ಯೆ, ಇಸ್ರೇಲ್ ಸರಕಾರವು ಕದನ ವಿರಾಮ ಒಪ್ಪಂದ ಮತ್ತು ಕೈದಿಗಳ ವಿನಿಮಯ ಒಪ್ಪಂದದ ಬಗ್ಗೆ ಗಂಭೀರತೆಯನ್ನು ಪ್ರದರ್ಶಿಸಿದರೆ ಕದನ ವಿರಾಮ ಮಾತುಕತೆ ಪುನರಾರಂಭಿಸಲು ಹಮಾಸ್ ಸಿದ್ಧವಾಗಿದೆ ಎಂದು ಹಮಾಸ್ ಮೂಲಗಳು ಹೇಳಿಕೆ ನೀಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News