×
Ad

ಉತ್ತರ ಇಸ್ರೇಲ್‌ನಲ್ಲಿ ಹಿಜ್ಬುಲ್ಲಾ ಪ್ರತಿದಾಳಿ | ಹೈಫಾ ಸೇರಿದಂತೆ ವಿವಿಧೆಡೆ ರಾಕೆಟ್‌ಗಳ ಸುರಿಮಳೆ

Update: 2024-10-10 22:02 IST

PC : aljazeera.com

ಟೆಲ್‌ಅವೀವ್ : ಗಾಝಾ ಹಾಗೂ ಲೆಬನಾನ್‌ಗಳಲ್ಲಿ ಇಸ್ರೇಲ್ ಭೀಕರ ದಾಳಿಯನ್ನು ಮುಂದುವರಿಸಿರುವಂತೆಯೇ, ಇತ್ತ ಹಿಜ್ಬುಲ್ಲಾ ಹೋರಾಟಗಾರರು ಉತ್ತರ ಇಸ್ರೇಲ್ ಮೇಲೆ ನಡೆಸಿದ ಪ್ರತಿ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಆಯಕಟ್ಟಿನ ಬಂದರು ಹೈಫಾ ಸೇರಿದಂತೆ ಇಸ್ರೇಲ್‌ನ ವಿವಿಧೆಡೆ 12ಕ್ಕೂ ಅಧಿಕ ರಾಕೆಟ್‌ಗಳು ಅಪ್ಪಳಿಸಿವೆ.

ಹೈಫಾದಲ್ಲಿ ರಾಕೆಟ್ ದಾಳಿಯಿಂದ ಐವರು ಗಾಯಗೊಂಡಿದ್ದಾರೆ. ಇಸ್ರೇಲ್‌ನ ಗಡಿಪಟ್ಟಣವಾದ ಕಿರ್ಯಾತ್ ಶಮೊನಾದಲ್ಲಿ ಇಬ್ಬರು ನಾಗರಿಕರು ರಾಕೆಟ್‌ದಾಳಿಯಿಂದ ಸಾವನ್ನಪ್ಪಿದ್ದಾರೆ. ಹೈಫಾದ ಉಪನಗರ ಕಿರ್ಯಾತ್ ಬಿಯಾಲಿಕ್‌ನಲ್ಲಿ ರಾಕೆಟ್ ಅಪ್ಪಳಿಸಿದ್ದರಿಂದಾಗಿ ವಿದ್ಯುತ್ ಪೂರೈಕೆ ಕಡಿತಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News