×
Ad

ಹಮಾಸ್ ನಾಯಕನ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ ವಿರುದ್ಧ ಯುದ್ಧವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದ ಹಿಝ್ಬುಲ್ಲಾ

Update: 2024-10-18 18:14 IST

PC : X 

ಜೆರುಸಲೇಂ/ಕೈರೊ: ಹಮಾಸ್ ನಾಯಕ ಯಹ್ಯಾ ಸಿನ್ವರ್ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ ವಿರುದ್ಧದ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಲೆಬನಾನ್ ನ ಹಿಝ್ಬುಲ್ಲಾ ಹೇಳಿದ್ದರೆ, “ಪ್ರತಿರೋಧದ ಸ್ಫೂರ್ತಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುವುದು” ಎಂದು ಇರಾನ್ ಹೇಳಿದೆ.

ಗಾಝಾ ಯುದ್ಧಕ್ಕೆ ಕಾರಣವಾದ ಅಕ್ಟೋಬರ್ 7, 2023ರ ದಾಳಿಯ ಸೂತ್ರಧಾರ ಎಂದು ಹೇಳಲಾದ ಸಿನ್ವರ್ ಅವರನ್ನು ಇಸ್ರೇಲ್ ಸೇನಾ ಪಡೆಗಳು ಫೆಲೆಸ್ತೀನ್ ಎನ್ ಕ್ಲೇವ್ ಮೇಲೆ ಬುಧವಾರ ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಗೈದಿದೆ.

ಸಿನ್ವರ್ ಹತ್ಯೆಗೆ ಪ್ರತಿಕ್ರಿಯಿಸಿರುವ ಇರಾನ್, “ಪ್ರತಿರೋಧದ ಸ್ಫೂರ್ತಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುವುದು” ಎಂದು ಹೇಳಿದೆ. ಮತ್ತೊಂದೆಡೆ, “ಇಸ್ರೇಲ್ ನೊಂದಿಗೆ ನಡೆಯುತ್ತಿರುವ ಯುದ್ಧವು ಮತ್ತಷ್ಟು ತೀವ್ರಗೊಳ್ಳುವ ಹೊಸ ಘಟ್ಟಕ್ಕೆ ರೂಪಾಂತರಗೊಂಡಿದೆ” ಎಂದು ಹಿಝ್ಬುಲ್ಲಾ ಎಚ್ಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News